ನಾಳೆಯೇ ಅಂಬಾನಿ ಪುತ್ರನ ಮದುವೆ; ಏನೆಲ್ಲಾ ವ್ಯವಸ್ಥೆಗಳಾಗಿವೆ..?
ಮುಂಬೈ; ನಾಳೆಯೇ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೆಯಲಿದೆ.. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳೂ ಪೂರ್ತಿಯಾಗಿವೆ.. ದೇಶ ವಿದೇಶದಿಂದ ಸಾವಿರಾರು ಗಣ್ಯರು ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.. ಹೀಗಾಗಿ ಜಿಯೋ ವರ್ಲ್ಡ್ ಸೆಂಟರ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ..
ಇದನ್ನೂ ಓದಿ; ನಾಗಮಂಗಲ ಬಳಿ ಭೀಕರ ಅಪಘಾತ; ಮೂವರ ದುರ್ಮರಣ!
60 ಸದಸ್ಯರ ವಿಶೇಷ ಭದ್ರತಾ ತಂಡದಲ್ಲಿ 10 ಎನ್‌ಎಸ್‌ಜಿ ಕಮಾಂಡೋಗಳಿದ್ದಾರೆ.. 200 ಅಂತಾರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕೂಡಾ ನಿಯೋಜನೆಯಾಗಿದ್ದಾರೆ.. ಇನ್ನು ಇತರೆ 300 ಭದ್ರತಾ ಸಿಬ್ಬಂದಿ ಇದ್ದು, 100ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರು ಕೂಡಾ ಕರ್ತವ್ಯ ನಿರ್ವಹಿಸಲಿದ್ದಾರೆ..
ಇದನ್ನೂ ಓದಿ; ಜೆಸಿಬಿ ಮೇಲೆ ಮೆರವಣಿಗೆ ಬಂದ ಮದುಮಗ!
ಮೆನು ಪಟ್ಟಿಯಲ್ಲಿ ಸುಮಾರು 2500ಕ್ಕೂ ಹೆಚ್ಚು ಭಕ್ಷ್ಯಗಳಿದ್ದು, 10ಕ್ಕೂ ಅಂತಾರಾಷ್ಟ್ರೀಯ ಬಾಣಸಿಗರು ಕೂಡಾ ಅಡುಗೆ ತಯಾರಿಸಲು ಬಂದಿದ್ದಾರೆ.. ದೇಶ, ವಿದೇಶದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ..
ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳು, ವಿವಿಐಪಿಗಳಿಗೆ ದುಬಾರಿ ರಿಟರ್ನ್ ಗಿಫ್ಟ್‌ಗಳನ್ನು ನೀಡಲಾಗುತ್ತದೆ.. ಕೊಟ್ಯಂತರ ರೂಪಾಯಿ ಇದಕ್ಕಾಗಿ ಖರ್ಚು ಮಾಡಲಾಗಿದೆ..