HealthNational

ರಸ್ತೆ ಅಪಘಾತದಲ್ಲಿ ಮಿಸ್ಟರ್‌ ತೆಲಂಗಾಣ ದುರ್ಮರಣ!

ಹೈದರಾಬಾದ್‌; ತೆಲಂಗಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿಸ್ಟರ್‌ ತೆಲಂಗಾಣ ಪ್ರಶಸ್ತಿ ವಿಜೇತ ಮೊಹಮದ್‌ ಸೊಹೈಲ್‌ ಮೃತಪಟ್ಟಿದ್ದಾರೆ.. ಖ್ಯಾತ ಮಾಡೆಲ್‌ ಹಾಗೂ ದೇಹದಾರ್ಢ್ಯಪಟುವಾಗಿದ್ದ ಮೊಹಮದ್‌ ಸೊಹೈಲ್‌ ಅವರು ಜೂನ್‌ 29ರಂದು ಸಿದ್ದಿಪೇಟೆಯಿಂದ ಮಿರಿದೊಡ್ಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು.. ಈ ವೇಳೆ ನಿಯಂತ್ರಣ ತಪ್ಪಿ ಸ್ಕ್ರ್ಯಾಪ್‌ ಆಟೋಗೆ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡಿದ್ದರು.. ಹೈದರಾಬಾದ್‌ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ನಾಳೆಯೇ ಅಂಬಾನಿ ಪುತ್ರನ ಮದುವೆ; ಏನೆಲ್ಲಾ ವ್ಯವಸ್ಥೆಗಳಾಗಿವೆ..?

23 ವರ್ಷ ವಯಸ್ಸಿನ ಸೊಹೈಲ್‌ ಅವರು ಸಿದ್ದಪೇಟ ಮೂಲದವರಾಗಿದ್ದಾರೆ.. ಇವರು ಸಣ್ಣ ವಯಸ್ಸಿನಲ್ಲೇ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು.. ದೇಹದಾರ್ಢ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು.. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಗೌರವಗಳು ಅವರಿಗೆ ಲಭಿಸಿದ್ದವು.

ಇದನ್ನೂ ಓದಿ; ಮುಡಾ ವಿಚಾರದಲ್ಲಿ ನಮ್ಮದೂ ತಪ್ಪಾಗಿದೆ; ಸಿದ್ದರಾಮಯ್ಯ

Share Post