LifestyleNational

ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ಮೌಲ್ಯದ ಡೈಮಂಡ್‌ ನೆಕ್ಲೇಸ್‌

ಚೆನ್ನೈ; ಕಸದ ತೊಟ್ಟಿಯಲ್ಲಿ 5 ಲಕ್ಷ ರೂಪಾಯಿ ಬೆಲೆ ಬಾಳುವ ಡೈಮಂಡ್‌ ನೆಕ್ಲೇಸ್‌ ಪತ್ತೆಯಾಗಿದೆ.. ಪೌರಕಾರ್ಮಿಕರು ಕಸ ಎತ್ತುವಾಗ ನೆಕ್ಲೇಸ್‌ ಸಿಕ್ಕಿದ್ದು, ಅದನ್ನು ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; 3 ಗ್ರಾಮಗಳಿಗೆ ನುಗ್ಗಿದ ಆಗಂತುಕರು; 26 ಮಂದಿಯನ್ನು ಕಡಿದು ಕೊಂದರು!

ಚೆನ್ನೈ ನಿವಾಸಿ ದೇವರಾಜ್‌ ಅವರಿಗೆ ಸೇರಿದ ನೆಕ್ಲೇಸ್‌ ಇದಾಗಿದೆ.. ಈ ಡೈಮಂಡ್‌ ನೆಕ್ಲೇಸ್‌ ಅನ್ನು ತನ್ನ ಮಗಳ ಮದುವೆಗಾಗಿ ದೇವರಾಜ್‌ ಅವರ ತಾಯಿ ಉಡುಗೊರೆಯಾಗಿ ಕೊಟ್ಟಿದ್ದರು.. ಆದ್ರೆ ದೇವರಾಜ್‌ ಅವರು ನೆಕ್ಲೇಸ್‌ ಕಳೆದುಕೊಂಡಿದ್ದರು.. ಅರಿವಿಲ್ಲದೆ ಕಸದ ಜೊತೆಗೆ ಅದನ್ನು ಹಾಕಿಬಿಟ್ಟಿದ್ದರು.. ವಿಷಯ ಗೊತ್ತಾದ ಮೇಲೆ ಪೌರಕಾರ್ಮಿಕರಿಗೆ ವಿಷಯ ತಿಳಿಸಿ ಎಲ್ಲಾ ಕಸದ ತೊಟ್ಟಿಗಳಲ್ಲಿ ಹುಡುಕಾಡಲಾಯಿತು.. ಈ ವೇಳೆ ಪೌರಕಾರ್ಮಿಕರೊಬ್ಬರಿಗೆ ಈ ನೆಕ್ಲೇಸ್‌ ಸಿಕ್ಕಿದೆ..

ಇದನ್ನೂ ಓದಿ; ಅಪಾರ್ಟ್‌ಮೆಂಟ್‌ನಲ್ಲಿ 14 ಯುವಕರು, 6 ಯುವತಿಯರು!; ರೇವ್‌ ಪಾರ್ಟಿ ಮಾಡ್ತಿದ್ದವರು ಸಿಕ್ಕಿಬಿದ್ದಿದ್ದು ಹೇಗೆ..?

ನೆಕ್ಲೇಸ್‌ ಸಿಕ್ಕಿದಾಗ ಪೌರಕಾರ್ಮಿ ಬಚ್ಚಿಟ್ಟುಕೊಳ್ಳಬಹುದಿತ್ತು.. ಆದ್ರೆ ಪೌರಕಾರ್ಮಿಕರು ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ..

Share Post