National

ತಮಿಳುನಾಡಿನಲ್ಲಿ ಒಂದೇ ದಿನಕ್ಕೆ 33 ಓಮಿಕ್ರಾನ್‌ ಸೋಂಕು

ಚೆನೈ : ಕೊರೊನಾ ಮೂರನೇ ತಳಿ ಓಮಿಕ್ರಾನ್‌ ನೆರೆರಾಜ್ಯದಲ್ಲಿ ಅಬ್ಬರಿಸುತ್ತಿದೆ. ತಮಿಳುನಾಡಿನಲ್ಲಿ ಗುರುವಾರ ಒಂದೇ ದಿನ ೩೩ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ಮೂರನೇ ಅಲೆಯ ಭೀತಿ ಮತ್ತೆ ಗರಿಗೆದರಿದೆ.

ಕೋವಿಡ್‌ ಸೋಂಕಿಗೆ ಒಳಗಾದವರಿಂದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಕಳುಹಿಸಲಾಗಿತ್ತು. ಈ ವೇಳೆ ೩೩ ಜನರಿಗೆ ಓಮಿಕ್ರಾನ್‌ ಸೋಂಕು ತಗುಲಿರುವುದು ಖಚಿತವಾಗಿದೆ. ಒಂದೇ ದಿನದಲ್ಲಿ ಇಷ್ಟು ಕೇಸ್‌ ಬಂದಿರುವುದು  ತೀವ್ರ ಆತಂಕ ಸೃಷ್ಠಿ ಮಾಡಿದೆ. ಈ ಮೂಲಕ ತಮಿಳುನಾಡಿನಲ್ಲಿ ೩೪ ಕೇಸ್‌ಗಳು ವರದಿಯಾಗಿದೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಸುಬ್ರಮಣ್ಯಂ ಈ ಮಾಹಿತಿ ಹಂಚಿಕೊಂಡಿದ್ದಾರೆ. 57 ಜನರ ಮಾದರಿಗಳನ್ನು ಪಡೆಯಲಾಗಿತ್ತು ಅದರಲ್ಲಿ ೩೩ ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನು ೨೬ ಮಾದರಿಗಳ ರಿಸಲ್ಟ್‌ ಬರುವುದು ಬಾಕಿ ಇದೆ.

ಎಲ್ಲೆಲ್ಲಿ ಎಷ್ಟು ಕೇಸ್‌

ಚೆನೈ – 26 ಕೇಸ್‌

ಮಧುರೈ – 4 ಕೇಸ್‌

ತಿರುವಣಮಲೈ – 2 ಕೇಸ್
ಸೇಲಂ – 1 ಕೇಸ್

೩೪ ಕೇಸ್‌ಗಳ ಪೈಕಿ ಇಬ್ಬರು ಮಕ್ಕಳು. ಇನ್ನುಳಿದ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಸೋಂಕು ಹೆಚ್ಚಿರುವ ದೇಶದಿಂದ ಬರುತ್ತಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ೩೪ ಪ್ರಕರಣಗಳಲ್ಲಿ ಯಾರೊಬ್ಬರಿಗೂ ರೋಗದ ಗುಣಲಕ್ಷಣಗಳು ಕಂಡು ಬಂದಿಲ್ಲ. ಎಲ್ಲರನ್ನು ಐಸೋಲೇಟ್‌ ಮಾಡಲಾಗಿದ್ದು, ತಮಿಳುನಾಡಿನ ಸರ್ಕಾರ ಎಲ್ಲರಿಗೂ ಚಿಕಿತ್ಸೆ ನೀಡುತ್ತಿದೆ ಎಂದು ವರದಿಯಾಗಿದೆ.

Share Post