HealthNational

ಮಗುಚಿಬಿದ್ದ 50 ಪ್ರಯಾಣಿಕರಿದ್ದ ದೋಣಿ; ಇಬ್ಬರ ಸಾವು, 7 ಮಂದಿ ನಾಪತ್ತೆ!

ಒಡಿಶಾ; ಒಡಿಶಾದಲ್ಲಿ ದೋಣಿ ದುರಂತ ನಡೆದಿದೆ.. 50 ಮಂದಿ ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ಮಗುಚಿಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.. ಏಳು ಮಂದಿ ನಾಪತ್ತೆಯಾಗಿದ್ದಾರೆ.. ಉಳಿದವರನ್ನು ರಕ್ಷಣೆ ಮಾಡಲಾಗಿದೆ..

ಇದನ್ನೂ ಓದಿ; ಕಾರು-ಟ್ರಕ್‌ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ 10 ಮಂದಿ ದುರ್ಮರಣ

ಒಡಿಶಾದ ಝಾರ್ಸುಗುಡಾ ಜಿಲ್ಲೆಯಲ್ಲಿರುವ ಮಹಾನದಿಯಲ್ಲಿ ಈ ದುರ್ಘಟನೆ ನಡೆದಿದೆ. ಪಥರ್ಸೇನಿ ಕುಡಾದಿಂದ ಬರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ದೋಣಿ ತೆರಳುತ್ತಿತ್ತು.. ದೋಣಿ ಮಗುಚಿ ಬೀಳುತ್ತಿದ್ದಂತೆ, ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿದ್ದಾರೆ. 35 ಮಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ..

ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೂ ಕೂಡಾ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.. ನಾಪತ್ತೆಯಾಗಿರುವ ಏಳು ಮಂದಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.. ಮುಳುಗು ತಜ್ಞರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಒಡಿಶಾ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ..

ಇದನ್ನೂ ಓದಿ; ಬಿಜೆಪಿ ನೇತೃತ್ವದ ಎನ್‌ಡಿಎಗೆ 220 ಸೀಟು ಅಷ್ಟೇನಾ ಬರೋದು..?

Share Post