ಮಳೆಯಿಂದಾಗಿ ವಿದ್ಯುತ್ ಕಡಿತ..!; ಮೊಬೈಲ್ ಚಾರ್ಜ್ ಮಾಡಲು 60 ರೂ. ವಸೂಲಿ!
ಚಿಕ್ಕಮಗಳೂರು; ರಾಜ್ಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ.. ಇದರಿಂದಾಗಿ ನಿರಂತರವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.. ಈ ಹಿನ್ನೆಲೆಯಲ್ಲಿ ಕೆಲವರು ಇದನ್ನೇ ಒಂದು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.. ಜನರೇಟರ್ ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಡುವ ಬ್ಯುಸಿನೆಸ್ ಶುರುವಿಟ್ಟುಕೊಂಡಿದ್ದಾರೆ..
ಇದನ್ನೂ ಓದಿ; 3 ಗ್ರಾಮಗಳಿಗೆ ನುಗ್ಗಿದ ಆಗಂತುಕರು; 26 ಮಂದಿಯನ್ನು ಕಡಿದು ಕೊಂದರು!
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿ ಹಾಂದಿ ಗ್ರಾಮದ ಶಾಮಿಯಾನ ಅಂಗಡಿಯಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜಿಂಗ್ ಮಾಡಿಕೊಡುವ ಕೆಲಸ ನಡೆಯುತ್ತಿದೆ.. ಕೇಳಿದಷ್ಟು ಹಣ ಕೊಟ್ಟು ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳಲು ಜನರು ಸಾಲುಗಟ್ಟಿ ನಿಂತಿದ್ದಾರೆ..
ಒಂದು ಮೊಬೈಲ್ ಫುಲ್ ಚಾರ್ಜ್ ಮಾಡಲು 60 ರೂಪಾಯಿ ಹಾಗೂ 50 ಪರ್ಸೆಂಟ್ ಚಾರ್ಜ್ ಮಾಡಿಕೊಡಲು 40 ರೂಪಾಯಿ ವಸೂಲಿ ಮಾಡಲಾಗುತ್ತಿದೆ.. ಗ್ರಾಮದ ಯುವಕರು, ವಿದ್ಯಾರ್ಥಿಗಳು ಹಾಗೂ ಅವಶ್ಯಕತೆ ಇರುವವರು ಸಾಲುಗಟ್ಟಿ ನಿಂತು ಚಾರ್ಜ್ ಮಾಡಿಸುತ್ತಿದ್ದಾರೆ..
ಈ ಭಾಗದಲ್ಲಿ ಸುಮಾರು 2000 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ತಿಳಿದುಬಂದಿದೆ.. 120 ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದೆ ಎಂದು ತಿಳಿದುಬಂದಿದೆ..