ಇಲ್ಲಿ ಸುಂದರಿಯ ಬೆತ್ತಲೆ ದೇಹದ ಮೇಲೆ ಬಡಿಸ್ತಾರೆ ಊಟ!; ಜಪಾನ್‌ನಲ್ಲಿ ವಿಚಿತ್ರ ರೆಸ್ಟೋರೆಂಟ್!
ಟೊಕಿಯೋ; ಹೋಟೆಲ್‌ಗಳವರು ಗ್ರಾಹಕರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿರುತ್ತಾರೆ.. ಆದ್ರೆ ಇಂತಹ ವಿಚಿತ್ರ ಮಾತ್ರ ನೀವು ನೋಡಿರೋದಿಲ್ಲ.. ಯಾಕಂದ್ರೆ ಜಪಾನ್‌ನ ಟೋಕಿಯೋದಲ್ಲಿರುವ ಒಂದು ಹೋಟೆಲ್‌ನಲ್ಲಿ ಸುಂದರ ಹುಡಿಗಿಯರನ್ನು ಟೇಬಲ್ ಮೇಲೆ ಬೆತ್ತಲೆಯಾಗಿ ಮಲಗಿಸಿರುತ್ತಾರೆ.. ಆಕೆಯ ಮೇಲೆ ಆಹಾರ ಪದಾರ್ಥಗಳನ್ನು ಜೋಡಿಸಿರುತ್ತಾರೆ.. ಕಾಎಯ ಸುತ್ತಲೂ ಕುಳಿತುಕೊಂಡು ಗ್ರಾಹಕರು ಆ ಆಹಾರವನ್ನು ಸೇವನೆ ಮಾಡಬಹುದು.. ನಂಬೋದು ಕಷ್ಟ ಆದರೂ ಇದು ನಿಜ..
ಬೆತ್ತಲೆ ದೇಹದ ಮೇಲೆ ಆಹಾರ ಬಡಿಸ್ತಾರೆ;
ನಮ್ಮಲ್ಲಿ ಹೋಟೆಲ್‌ಗಳಲ್ಲಿ ತಟ್ಟೆ, ಬಾಳೆ ಎಲೆ, ಇಸ್ತ್ರಿ ಎಲೆ, ಪೇಪರ್ ಎಲೆ ಹೀಗೆ ಹಲವಾರು ವಸ್ತುಗಳ ಮೇಲೆ ಆಹಾರವನ್ನು ಬಡಿಸಲಾಗುತ್ತದೆ.. ಆದ್ರೆ ಜಪಾನ್ ನ ಟೋಕಿಯೋದ ಹೋಟೆಲ್ ಒಂದರಲ್ಲಿ ಸುಂದರ ಮಹಿಳೆಯ ಬೆತ್ತಲೆ ದೇಹವೇ ತಟ್ಟೆ.. ಆಕೆಯ ಬೆತ್ತಲೆ ದೇಹದ ಮೇಲೆಯೇ ಆಹಾರ ಬಡಿಸಲಾಗುತ್ತದೆ.. ಜಪಾನ್‌ನಲ್ಲಿ ಇದೊಂದು ಹಳೆಯ ಪದ್ಧತಿ.. ಅನಾದಿ ಕಾಲದಿಂದ ಈ ಪದ್ಧತಿ ಅನುಸರಿಸಲಾಗುತ್ತಿದೆ..
ನ್ಯೋಟೈಮೊರಿ ಎಂದು ಕರೆಯುವ ವಿಚಿತ್ರ ಪದ್ಧತಿ;
ಹಿಂದಿನ ಕಾಲದಲ್ಲಿ ಜಪಾನ್ ನಲ್ಲಿ ನ್ಯೋಟೈಮೊರಿ ಎಂದು ಕರೆಯಲಾಗುವ ಪದ್ಧತಿ ಅನುಸರಿಸಲಾಗುತ್ತಿತ್ತು.. ಯುದ್ಧದಲ್ಲಿ ಗೆದ್ದುಬಂದವರಿಗೆ ಅದ್ದೂರಿ ಸ್ವಾಗತ ನೀಡುವುದರ ಜೊತೆಗೆ ಔತಣಕೂಟ ಏರ್ಪಡಿಸಲಾಗುತ್ತಿತ್ತು.. ಅದರಲ್ಲಿ ಸುಂದರವಾಗಿ ಹುಡುಗಿಯನ್ನು ಊಟದ ಟೇಬಲ್ ಮೇಲೆ ಬೆತ್ತಲೆಯಾಗಿ ಮಲಗಿಸಲಾಗುತ್ತಿತ್ತು.. ನಂತರ ಆಕೆಯ ಖಾಸಗಿ ಭಾಗಗಳನ್ನು ಹೂವುಗಳಿಂದ ಹಾಗೂ ಎಲೆಗಳಿಂದ ಮುಚ್ಚಲಾಗುತ್ತಿತ್ತು.. ದೇಹದ ಮೇಲೆ ಎಲೆಗಳನ್ನು ಜೋಡಿಸಿ ಅದರ ಮೇಲೆ ಆಹಾರ ಬಡಿಸಲಾಗುತ್ತಿತ್ತು.. ಇದೀಗ ಕೆಲ ಹೋಟೆಲ್‌ಗಳಲ್ಲಿ ಈ ಪದ್ಧತಿಯನ್ನು ಮುಂದುವರೆಸಲಾಗುತ್ತಿದೆ..
ಹೆಣ್ಣಿನ ಬೆತ್ತಲೆ ಪ್ರತಿಮೆಗಳ ಮೇಲೂ ಬಡಿಸಲಾಗುತ್ತೆ!;
ಸಮುರಾಯ್ಸ್ ಯುಗದಿಂದಲೂ ಈ ಪದ್ಧತಿ ಜಾರಿಯಲ್ಲಿದೆ.. ಈಗಲೂ ಕೂಡಾ ಕೆಲ ಹೋಟೆಲ್‌ಗಳಲ್ಲಿ ನಿಜವಾದ ಸುಂದರ ಹುಡುಗಿಯರನ್ನೇ ಇದಕ್ಕೆ ಬಳಸಲಾಗುತ್ತದೆ.. ಕೆಲ ಹೋಟೆಲ್‌ಗಳಲ್ಲಿ ಸಾಂಕೇತಿಕವಾಗಿ ಹೆಣ್ಣಿನ ದೇಹದ ಪ್ರತಿಮೆಗಳ ಮೇಲೆ ಆಹಾರ ಬಡಿಸಲಾಗುತ್ತದೆ.. ಬೆತ್ತಲೆ ದೇಹದ ಮೇಲೆ ಈ ರೀತಿ ಊಟ ಬಡಿಸುವುದು ಇಲ್ಲಿನ ಜನರ ವಾಡಿಕೆಯಂತೆ.. ಅಂದಹಾಗೆ ಹೀಗೆ ಮಲಗುವ ಮಹಿಳೆಗೆ ವಿಶೇಷ ರೀತಿಯ ತರಬೇತಿ ನೀಡಲಾಗುತ್ತದೆ.. ಯಾಕಂದ್ರೆ ಬಿಸಿಯಾದ ಆಹಾರಗಳನ್ನು ಬಡಿಸಿದಾಗ ಕದಲಿದರೆ ಆಹಾರ ಕೆಳಗೆ ಬೀಳುತ್ತದೆ.. ಹಾಗೆ ಆಗದಂತೆ ತಡೆಯಲು ಮಹಿಳೆಗೆ ವಿಶೇಷ ತರಬೇತಿ ನೀಡಲಾಗುತ್ತದೆ..