Health

ಪ್ಯಾರಾಸಿಟಮೋಲ್‌ ಹೆಚ್ಚು ತೆಗೆದುಕೊಂಡರೆ ಹೃದಯಾಘಾತ ಆಗುತ್ತಂತೆ!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾಯಿಲೆ ಬಂದರೆ ಜನರೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ.. ಅದರಲ್ಲೂ ಜ್ವರ, ತಲೆನೋವು, ಕೆಮ್ಮು ಮುಂದಾದ ಸಮಸ್ಯೆಯಾದರೆ ಜನರೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಪ್ಯಾರಾಸಿಟಮೋಲ್‌ ಮಾತ್ರೆಗಳು ಕಾಣಿಸುತ್ತವೆ.. ಸ್ವಲ್ಪ ಮೈಕೈ ಬಿಸಿಯಾದರೂ ಜನ ಪ್ಯಾರಾಸಿಟಮೋಲ್‌ ತೆಗೆದುಕೊಳ್ಳುತ್ತಾರೆ.. ಆದ್ರೆ ಹೆಚ್ಚಾಗಿ ಪ್ಯಾರಾಸಿಟಮೋಲ್‌ ಸೇವನೆ ಮಾಡುವುದರಿಂದ ಹೃದಯದ ಸಮಸ್ಯೆ ಹೆಚ್ಚಾಗಬಹುದು ಎಂದು ಅಧ್ಯಯನಗಳು ಹೇಳುತ್ತಿವೆ..

ಇದನ್ನೂ ಓದಿ; ಕೃಷಿ ಹೊಂಡಕ್ಕೆ ಬಿದ್ದ ಬಾಲಕ; ಮೇಲೆ ಬರಲಾರದೇ ಸಾವು!

ಕೊರೊನಾ ಬಂದು ಹೋದ ಮೇಲೆ ಪ್ರತಿಯೊಬ್ಬರೂ ಈ ಪ್ಯಾರಾಸಿಟಮೋಲ್‌ ಬಳಕೆ ಹೆಚ್ಚು ಮಾಡಿದ್ದಾರೆ.. ವೈದ್ಯರನ್ನು ಭೆಟಿಯಾಗದೇ ಸ್ವ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ.. ಇದರಿಂದಾಗಿ ಏನಾದರೂ ಅಪಾಯವಾಗಲಿದೆಯಾ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ.. ಈ ಪ್ಯಾರಾಸಿಟಮೋಲ್‌ ಮಾತ್ರಗಳನ್ನು ಇಲಿಗಳಿಗೆ ನೀಡಿ ತಜ್ಞರು ಅಧ್ಯಯನ ಮಾಡಿದ್ದಾರೆ.. ಆಗ ಅದು ಇಲಿಗಳ ಹೃದಯ ಅಂಗಾಂಶದಲ್ಲಿನ ಪ್ರೋಟೀನ್​​​ಗಳನ್ನು ಬದಲಿಸಿದೆ. ಈ ಪ್ಯಾರಾಸಿಟಮೋಲ್‌ ಮಾತ್ರೆಗಳ ಸೇವನೆಯಿಂದ ಯಕೃತನ್ನು ಹಾನಿಗೊಳಿಸುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ಇಲಿಗಳ ಮೇಲಿನ ಅಧ್ಯಯನದಿಂದ ತಿಳಿದುಬಂದಿದೆ.. ಇದರಿಂದ ಹೃದಯದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ; ಮನೆಯ ಮುಂದೆಯೇ ಕಾಡಾನೆಗಳ ಕಾಳಗ; ನೋಡಲು ರೋಚಕ, ಆದ್ರೆ ಪ್ರಾಣಸಂಕಟ!

ರಾಷ್ಟ್ರೀಯ ಆರೋಗ್ಯ ಸೇವೆ (NHS) ವರದಿಯ ಪ್ರಕಾರ, ವಯಸ್ಕರು 500mg ಮಾತ್ರೆಗಳನ್ನು ದಿನಕ್ಕೆ 4 ಬಾರಿ ತೆಗೆದುಕೊಳ್ಳಬಹುದು. ಆದರೆ ಡೋಸ್‌ಗಳ ನಡುವೆ ಕನಿಷ್ಠ 4 ಗಂಟೆಗಳ ಕಾಲ ಅಂತರವಿರಬೇಕು. 24 ಗಂಟೆಗಳಲ್ಲಿ 8 ಕ್ಕಿಂತ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಲಾಗಿದೆ.. ಆದರೂ ಕೂಡಾ ಈ ಬಗ್ಗೆ ಜಾಗ್ರತೆಯಿಂದ ಇರುವುದು ಒಳ್ಳೆಯದು.

ಇದನ್ನೂ ಓದಿ; ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ; ಏನು ಸಿಕ್ತು..?

 

Share Post