RUSSIA-UKRAIN WAR: ಖಾರ್ಕೀವ್ ಪೊಲೀಸ್ ಕಚೇರಿ, ಆಸ್ಪತ್ರೆ ಮೇಲೆ ದಾಳಿ
ಖಾರ್ಕೀವ್; ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ಅದ್ರಲ್ಲೂ ಉಕ್ರೇನ್ ಪ್ರಮುಖ ನಗರಗಳಲ್ಲಿ ಒಂದಾದ ಖಾರ್ಕೀವ್ ಮೇಲೆ ಕಳೆದ ಮೂರು ದಿನಗಳಿಂದ ನಿರಂತರ ದಾಳಿ ನಡೆಸುತ್ತಿದೆ. ಇಂದು ಖಾರ್ಕೀವ್‌ನಲ್ಲಿರುವ ಪೊಲೀಸ್ ಕಚೇರಿ ಮೇಲೆ ರಷ್ಯಾ ಮಿಲಿಟರಿ ಪಡೆ ಬಾಂಬ್ ದಾಳಿ ನಡೆಸಿದೆ.
ಬೆಳಗ್ಗೆಯಿಂದ ರಷ್ಯಾ ಯೋಧರು ನಿರಂತರ ಬಾಂಬ್ ದಾಳಿ ನಡೆಸಿದೆ. ಇದರಿಂದಾಗಿ ಪೊಲೀಸ್ ಕಚೇರಿ ಧಗಧಗನೆ ಹೊತ್ತಿ ಉರಿದಿದೆ. ಖಾರ್ಕೀವ್‌ನ ಇನ್ನೂ ಹಲವು ಪ್ರದೇಶಗಳಲ್ಲಿ ರಷ್ಯಾ ಯೋಧರು ದಾಳಿ ನಡೆಸುತ್ತಿದ್ದಾರೆ. ಶೆಲ್ ದಾಳಿ ಮೂಲಕ ಉಕ್ರೇನ್ ಸರ್ಕಾರಕ್ಕೆ ಸೇರಿದ ಕಟ್ಟಡಗಳನ್ನು ಧ್ವಂಸ ಮಾಡುತ್ತಿದ್ದಾರೆ. ಇದರಿಂದಾಗಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಖಾರ್ಕೀವ್‌ನ ಆಸ್ಪತ್ರೆಯೊಂದರ ಮೇಲೆ ರಷ್ಯಾದ ಏರ್ ಬಾರ್ನ್ ಪಡೆ ದಾಳಿ ನಡೆಸಿದೆ. ಪ್ಯಾರಾಚೂಟ್‌ನಲ್ಲಿ ಬಂದ ರಷ್ಯಾ ಯೋಧರು, ಆಸ್ಪತ್ರೆ ಮೇಲೆ ಬಾಂಬ್ ಮಳೆಗೆರೆದಿದ್ದಾರೆ.