InternationalSports

ಟೀಂ ಇಂಡಿಯಾವನ್ನು ಸೋಲಿಸಿದರೆ ಬಾಂಗ್ಲಾ ಆಟಗಾರನ ಜೊತೆ ಡೇಟಿಂಗ್‌; ಪಾಕ್‌ ಖ್ಯಾತ ನಟಿ

ನವದೆಹಲಿ; ವಿಶ್ವಕಪ್‌ ಏಕದಿನ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾವಾಗಿ ಸೋಲನುಭವಿಸಿತ್ತು. ಇದೀಗ ನಾಳೆ ಪುಣೆಯ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸೆಣಸಾಡಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತವನ್ನು ಮಣಿಸಿದರೆ, ಬಾಂಗ್ಲಾ ಆಟಗಾರನ ಜೊತೆ ರಾತ್ರಿ ಡೇಟಿಂಗ್‌ ಮಾಡುತ್ತೇನೆ ಎಂದು ಪಾಕ್‌ನ ಖ್ಯಾತ ನಟಿಯೊಬ್ಬರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪಾಕಿಸ್ತಾನದ ಜನಪ್ರಿಯನ ನಟಿ ಸೆಹರ್ ಶಿನ್ವಾರಿ, ಭಾರತವನ್ನು ಸೋಲಿಸಿದರೆ, ಬಾಂಗ್ಲಾ ಆಟಗಾರನ ಜೊತೆ ರಾತ್ರಿ ಡೇಟಿಂಗ್​ನಲ್ಲಿ ಫಿಶ್ ಡಿನ್ನರ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

 

Share Post