CrimeInternational

ರೆಸಾರ್ಟ್‌ನಲ್ಲಿ ಪತಿ ಮರ್ಮಾಂಗಕ್ಕೆ ಕಚ್ಚಿದ ಚೇಳು!; ಕಣ್ಣೀರಿಟ್ಟ ಪತ್ನಿ!

ವಾಷಿಂಗ್ಟನ್‌; ರೆಸಾರ್ಟ್‌ ಒಂದರಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಮರ್ಮಾಂಗಕ್ಕೆ ಚೇಳು ಕಚ್ಚಿದೆ.. ಇದರಿಂದಾಗಿ ಆತನ ಲೈಂಗಿಕ ಜೀವನ ಹಾಳಾಗಿದ್ದು, ನನ್ನ ಸಂಸಾರ ಹಾಳಾಯಿತು ಎಂದು ವ್ಯಕ್ತಿಯ ಪತ್ನಿಯ ಕಣ್ಣೀರು ಸುರಿಸಿದ್ದಾಳೆ.. ಅಮೆರಿಕಾದ ಲಾಸ್ ವೆಗಾಸ್‌ನಲ್ಲಿರುವ ವೆನೆಶಿಯನ್ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಖಾಸಗಿ ಮಾಧ್ಯಮವೊಂದು ಸುದ್ದಿ ಮಾಡಿದೆ.. ರೆಸಾರ್ಟ್‌ನಲ್ಲಿ ಮಲಗಿದ್ದಾಗ ಮೈಯೆಲ್ಲಾ ಉರಿ ಶುರುವಾಗಿದೆ.. ಲೈಟ್‌ ಆನ್‌ ಮಾಡಿ ಏನಾಯ್ತು ಎಂದು ಪರೀಕ್ಷೆ ಮಾಡಿದಾಗ ಖಾಸಗಿ ಅಂಗದ ಮೇಲೆ ಚೇಳು ಓಡಾಡುತ್ತಿದ್ದದ್ದು ಪತ್ತೆಯಾಗಿದೆ..

ಇದನ್ನೂ ಓದಿ; ಒಳ್ಳೆಯ ಅಭಿಮಾನಿಗಳು ಸಿಕ್ಕಿದ್ದರಿಂದ ನಾನು ಒಳ್ಳೆಯವನಾಗಿದ್ದೇನೆ; ನಟ ಸುದೀಪ್‌

ಅದು ಫೈವ್‌ ಸ್ಟಾರ್‌ ಹೋಟೆಲ್‌ ಆಗಿದ್ದು, ದುಬಾರಿ ಬೆಲೆ ಇದೆ.. ಹೀಗಿದ್ದರೂ ರೆಸಾರ್ಟ್‌ನವರು ಕೊಠಡಿಯನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ.. ಈ ಕಾರಣದಿಂದಲೇ ನನ್ನ ಲೈಂಗಿಕ ಜೀವನ ಹಾಳಾಗಿದೆ ಎಂದು ವ್ಯಕ್ತಿ ಆರೋಪ ಮಾಡಿದ್ದಾರೆ.. ಇನ್ನು ವ್ಯಕ್ತಿಗೆ ಚೇಳು ಕುಟುಕಿದ್ದರಿಂದ ಆತನಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.. ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD)ನಿಂದ ಬಳಲುತ್ತಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.. ಈನ್ನು ಚೇಳು ಕಚ್ಚಿದ್ದರಿಂದ ಮಾನಸಿಕ ವಾಗಿ ಮೈಕೆಲ್‌ ಅಸ್ವಸ್ಥನಾಗಿದ್ದರೆ, ಆತನ ಪತ್ನಿ ನನ್ನ ಸಾಂಸಾತರಿಕ ಜೀವನ ಹಾಳಾಯಿತು ಎಂದು ಗೋಳಾಡುತ್ತಿದ್ದಾಳೆ..

ಇದನ್ನೂ ಓದಿ; 10 ವರ್ಷದಿಂದ ನಿರಂತರ ಸಾಮೂಹಿಕ ಅತ್ಯಾಚಾರ!; ವಿಡಿಯೋ ಚಿತ್ರೀಕರಿಸುತ್ತಿದ್ದ ಗಂಡ!

ಇನ್ನು ಹೋಟೆಲ್‌ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ.. ನನ್ನ ಖಾಸಗಿ ಅಂಗಕ್ಕೆ ಚೇಳು ಕಚ್ಚಿದೆ ಎಂದು ಹೇಳಿದರೆ ಹೋಟೆಲ್‌ ಸಿಬ್ಬಂದಿ ನನ್ನೊಂದಿಗೆ ಹಾಸ್ಯ ಮಾಡಿದ್ದಾರೆ.. ನಾನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಚೇಳು ಕಚ್ಚಿದ್ದರಿಂದ ನನ್ನ ಖಾಸಗಿ ಭಾಗದಲ್ಲಿ ಗಾಯವಾಗಿದೆ. ಜೊತೆಗೆ ನಿಮಿರುವಿಕೆ ಸಮಸ್ಯೆ ಶುರುವಾಗಿದೆ ಎಂದು ಮೈಕೆಲ್‌ ಗೋಳು ತೋಡಿಕೊಂಡಿದ್ದಾರೆ..

Share Post