RUSSIA-UKRAINE WAR; ವಿದ್ಯಾರ್ಥಿಗಳನ್ನು ಕರೆತರಲು ವಾಯುಪಡೆ ವಿಮಾನ
ನವದೆಹಲಿ; ಆಪರೇಷನ್ ಗಂಗಾ ಮತ್ತಷ್ಟು ಚುರುಕೊಂಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ವಾಯುಪಡೆಯ ವಿಮಾನಗಳು ಕಾರ್ಯಾಚರಣೆಗಿಳಿದಿವೆ. ಇಂದು ಬೆಳಗ್ಗೆ ಒಂದು ವಿಮಾನ ರೊಮಾನಿಯಾಗೆ ತೆರಳಿದೆ.
ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ಮಾಸ್ಟರ್ ವಿಮಾನಗಳನ್ನು ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಭಾರತ ಸರ್ಕಾರ ನಿಯೋಜಿಸಿದೆ. ಪೊಲೆಂಡ್, ಹಂಗೇರಿ ಮತ್ತು ರೊಮಾನಿಯಾಗಳಿಗೆ ಈ ವಿಮಾನಗಳು ತೆರಳಲಿವೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡಲಾಗುತ್ತದೆ. ಇನ್ನೊಂದೆಡೆ ಉಕ್ರೇನ್ನಲ್ಲಿದ್ದ 220 ವಿದ್ಯಾರ್ಥಿಗಳು ಟರ್ಕಿ ರಾಜಧಾನಿ ಇಸ್ತಾಂಬುಲ್ ಮಾರ್ಗವಾಗಿ ಭಾರತಕ್ಕೆ ಬಂದಿದ್ದಾರೆ.