CrimeInternational

ಇದ್ದಕ್ಕಿದ್ದಂತೆ ಮಿನಿ ವಿಮಾನ ಪತನ; ಏಳು ಮಂದಿ ದುರ್ಮರಣ!

ಥಾಯ್ಲೆಂಡ್‌; ಮಿನಿ ವಿಮಾನವೊಂದು ಪತನವಾಗಿದ್ದು, ಅದರಲ್ಲಿದ್ದ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಥಾಯ್ಲೆಂಡ್‌ನ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನ ಪತನವಾಗಿದ್ದು, ಅದರ ಅವಶೇಷಗಳು ಕಾಡೊಂದರಲ್ಲಿ ಪತ್ತೆಯಾಗಿವೆ.. ಈ ವಿಮಾನ ಬ್ಯಾಂಕಾಕ್‌ನಿಂದ ಟೇಕಾಫ್‌ ಆಗಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮೆಗಾಪ್ಲ್ಯಾನ್‌ ಜೊತೆ ದೆಹಲಿಯತ್ತ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌

ಥಾಯ್ ಫ್ಲೈಯಿಂಗ್ ಸರ್ವೀಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸೆಸ್ನಾ ಕಾರವಾನ್ ಇದಾಗಿದೆ.. ಇದರಲ್ಲಿ ಇಬ್ಬರು ಪೈಲಟ್‌ಗಳು ಸೇರಿ ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದ. ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.. ಮೃತರಲ್ಲಿ ಐವರು ಹಾಂಕಾಂಗ್‌ನವರಾದರೆ, ಇಬ್ಬರು ಚೀನೀಯರು, ಇಬ್ಬರು ಪೈಲಟ್‌ಗಳು ಸೇರಿದ್ದಾರೆ..

ಇದನ್ನೂ ಓದಿ; ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ಸಂಪುಟಕ್ಕಿದೆಯಾ..?

ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ ವಿಮಾನ ಟೇಕಾಫ್‌ ಆಗಿದ್ದು, 11 ನಿಮಿಷಗಳ ನಂತರ ಸಂಪರ್ಕ ಕಡಿದುಕೊಂಡಿತ್ತು.. ವಿಮಾನ ನಿಲ್ದಾಣದಿಂದ 35 ಕಿಲೋಮೀಟರ್‌ ದೂರದಲ್ಲಿ ಅದು ಪತನವಾಗಿದೆ ಎಂದು ತಿಳಿದುಬಂದಿದೆ..

Share Post