ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ
ನವದೆಹಲಿ; ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿದ್ದರಿಂದ ಪಾಕಿಸ್ತಾನದ ವಿವಾಹಿತ ಮಹಿಳೆ ಸೀಮಾ ಹೈದರ್ ತಮ್ಮ ನಾಲ್ವರು ಮಕ್ಕಳ ಜೊತೆ ಪ್ರಿಯಕರನನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಸೀಮಾ ಹೈದರ್ ಇದೀಗ ತನ್ನ ಪ್ರಿಯಕರ ಸಚಿನ್ ಮೀನಾ ಜೊತೆ ವಾಸವಿದ್ದಾಳೆ. ಆಕೆ ಇತ್ತೀಚೆಗೆ ಗರ್ಭಿಣಿಯಾಗಿದ್ಧಾಳೆ ಎಂಬ ಸುದ್ದಿಯೂ ಆಗಿತ್ತು. ಇದೀಗ ಸೀಮಾ ದೊಡ್ಡ ಶಾಕ್ ಸಿಕ್ಕಿದೆ. ಸೀಮಾ ಹೈದರ್ ಮೊದಲ ಗಂಡ ಗುಲಾಮ್ ಹೈದರ್, ತಮ್ಮ ಪತ್ನಿ ಸೀಮಾ ಹೈದರ್ ಹಾಗೂ ಆಕೆಯ ಪ್ರಿಯಕರ ಸಚಿನ್ ಮೀನಾ ಹಾಗೂ ಇವರಿಬ್ಬರ ಪರ ವಕೀಲ ಡಾ.ಎ.ಪಿ.ಸಿಂಗ್ ಬಿರುದ್ಧ ಮಾನನಷ್ಟ ನೋಟೀಸ್ ಕಳುಹಿಸಿದ್ದಾರೆ.
ಇದನ್ನೂ ಓದಿ; 2022ರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್; ಸೇಡಿನ ರಾಜಕಾರಣ ಆರೋಪ!
ಮೂರು ಕೋಟಿ ಮಾನನಷ್ಟ ಕೇಳಿದ ಪತಿ;
ಮೂರು ಕೋಟಿ ಮಾನನಷ್ಟ ಕೇಳಿದ ಪತಿ; ಸೀಮಾ ಹೈದರ್‌ಗೆ ಪಾಕಿಸ್ತಾನದಲ್ಲಿ ಈಗಾಗಲೇ ಮದುವೆಯಾಗಿದ್ದು, ಆಕೆಗೆ ನಾಲ್ವರು ಮಕ್ಕಳಿದ್ದರು. ಆದರೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಸಚಿನ್ ಮೀನಾಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ. ಇದೀಗ ಇವರಿಗೆ ಮೊದಲ ಗಂಡನಿಂದ ಸಂಕಷ್ಟ ಎದುರಾಗಿದೆ. ಇಬ್ಬರೂ ಸೇರಿ ನನಗೆ 3 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಇವರಿಬ್ಬರ ಪರ ವಕೀಲ ಡಾ.ಎ.ಪಿ.ಸಿಂಗ್ ಗೆ 5 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ನೀಡಲಾಗಿದೆ.
ಒಂದು ತಿಂಗಳೊಳಗೆ ದಂಡ ಕಟ್ಟಬೇಕೆಂದು ಸೂಚನೆ;
ಒಂದು ತಿಂಗಳೊಳಗೆ ದಂಡ ಕಟ್ಟಬೇಕೆಂದು ಸೂಚನೆ; ಗುಲಾಮ್ ಹೈದರ್ ಪರ ವಕೀಲ ಮೊಮಿನ್ ಮಲಿಕ್ ಮೂವರಿಗೂ ನೋಟಿಸ್ ಕಳುಹಿಸಿದ್ದಾರೆ. ಒಂದು ತಿಂಗಳ ಒಳಗೆ ಮೂವರೂ ಕ್ಷಮೆಯಾಚನೆ ಮಾಡಬೇಕು. ಜೊತೆಗೆ ಮಾನನಷ್ಟದ ಹಣವನ್ನು ಕೊಡಬೇಕು. ಇಲ್ಲದಿದ್ದರೆ ಕೋರ್ಟ್‌ನಲ್ಲಿ ಮಾನನಷ್ಟ ಕೇಸ್ ದಾಖಲು ಮಾಡಲಾಗುವುದು ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ. ಇದರಿಂದಾಗಿ ಸೀಮಾ ಹೈದರ್ ಹಾಗೂ ಆಕೆಯ ಪ್ರಿಯಕರ ಹಾಗೂ ವಕೀಲನಿಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ; ಬೆಂಗಳೂರು ಸೇರಿ 7 ರಾಜ್ಯಗಳಲ್ಲಿ NIA ದಾಳಿ; ತೀವ್ರ ತನಿಖೆ
ಭಾರತದ ವಕೀಲನನ್ನು ನೇಮಿಸಿರುವ ಪತಿ;
ಭಾರತದ ವಕೀಲನನ್ನು ನೇಮಿಸಿರುವ ಪತಿ; ಪಾಕಿಸ್ತಾನದಲ್ಲಿರುವ ಸೀಮಾ ಹೈದರ್ ಪತಿ ಗುಲಾಮ್ ಹೈದರ್, ಹರಿಯಾಣದ ಪಾಣಿಪತ್‌ನ ಹಿರಿಯ ವಕೀಲ ಮೊಮಿನ್ ಮಲಿಕ್ ಅವರನ್ನು ನೇಮಿಸಿಕೊಂಡಿದ್ದಾರೆ. ಸೀಮಾ ಹೈದರ್ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದರು. ಹೀಗಾಗಿ ಆಕೆಯನ್ನು ಬಂಧಿಸಲಾಗಿತ್ತು. ಈ ವೇಳೆ ನೀಡಿದ ದಾಖಲೆಗಳಲ್ಲಿ ಆಕೆಯ ಗಂಡನ ಹೆಸರು ಗುಲಾಂ ಹೈದರ್ ಎಂದೇ ಇತ್ತು. ಆದ್ರೆ ವಕೀಲ ಎಪಿ ಸಿಂಗ್, ಸಚಿನ್ ಎಂಬುವವನೇ ಸೀಮಾ ಹೈದರ್ ಪತಿ ಎಂದು ಹೇಳುತ್ತಿದ್ದಾರೆ. ಇದು ಸುಳ್ಳು. ಈ ಕಾರಣಕ್ಕಾಗಿ ಸೀಮಾ ಹೈದರ್, ಪತಿ ಗುಲಾಮ್ ಹೈದರ್ ಅವರಿಗೆ ಪಾಕಿಸ್ತಾನದಿಂದ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ ಎಂದು ಮೊಮಿನ್ ಮಲಿಕ್ ಬಹಿರಂಗಪಡಿಸಿದ್ದಾರೆ.
ಇಲ್ಲಿಯವರೆಗೆ ಸೀಮಾ ಹೈದರ್‌ಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿಲ್ಲ ಎಂದು ಗುಲಾಮ್ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಅವರ ನಾಲ್ವರು ಮಕ್ಕಳು ಸಚಿನ್‌ನಿಂದ ಬೇರ್ಪಟ್ಟು ಅವರ ಓದು ಹದಗೆಡಲು ಸಚಿನ್ ಕಾರಣ ಎಂದು ಆರೋಪಿಸಿದ್ದಾರೆ. ಪಬ್ಜಿ ಆನ್‌ಲೈನ್ ಗೇಮ್‌ನಲ್ಲಿ ಸಚಿನ್ ಮೀನಾ ಜೊತೆ ಸೀಮಾ ಹೈದರ್ ಅವರ ಪರಿಚಯ ಪ್ರೀತಿಗೆ ತಿರುಗಿತು. ಇಬ್ಬರೂ ಕಳೆದ ವರ್ಷ ಮಾರ್ಚ್‌ನಲ್ಲಿ ನೇಪಾಳದಲ್ಲಿ ಮೊದಲ ಬಾರಿಗೆ ಭೇಟಿಯಾಗಿ ಮದುವೆಯಾದರು. ಆ ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದ ಸೀಮಾ ತನ್ನ ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಮರಳಿದ್ದಳು. ಮೇ 10ರಂದು ಕರಾಚಿಯಿಂದ ದುಬೈ ಮೂಲಕ ನೇಪಾಳ ತಲುಪಿ ಅಲ್ಲಿಂದ ಪೋಖ್ರಾನ್‌ನಿಂದ ಭಾರತಕ್ಕೆ ಬಂದಿದ್ದಾಳೆ. ಈ ಘಟನೆ ಭಾರತ ಹಾಗೂ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ; ಕಡಬ ಆ್ಯಸಿಡ್ ದಾಳಿ; ಸೂಕ್ತ ಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ