ವಿದೇಶದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಜೈಲು
ಸಿಂಗಪುರ್: ವಿದ್ಯಾರ್ಥಿಗಳು ಚನ್ನಾಗಿ ಓದಿ ತಮ್ಮ ಹೆಸರು ಉಳಿಸುತ್ತಾರೆಂದು ಸಾಲ, ಸೋಲ ಮಾಡಿ ಹೆತ್ತವರು ವಿದೇಶಗಳಿಗೆ ಮಕ್ಕಳನ್ನು ಕಳಿಸಿಕೊಟ್ರೆ ಅವರು ಮಾತ್ರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಹೆತ್ತವರ ಹೆಸರ ಇತ್ತ ದೇಶದ ಹೆಸರು ಎರಡನ್ನೂ ಹಾಳು ಮಾಡುತ್ತಾರೆ.
ಅಧ್ಯಯನಕ್ಕೆಂದು ಸಿಂಗಾಪುರ್‌ಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ವಿವಿಧ ಬ್ಯಾಂಕ್‌ಗಳಿಂದ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗಳಿಗೆ ಜಮಾ ಮಾಡಿಕೊಂಡಿದ್ದಾರೆ. ಈ ಆರೋಪದಡಿ ಮೂವರು ವಿದ್ಯಾರ್ಥಿಗಳಿಗೆ ಅಲ್ಲಿನ ಕೋರ್ಟ್ ಜೈಲು ಶಿಕ್ಷೆಯನ್ನು ವಿಧಿಸಿದೆ.
ನಂದಿ ನೀಲಾದ್ರಿ (24) – 18 ತಿಂಗಳು, ಆಕಾಶದೀಪ್ ಸಿಂಗ್‌ಗೆ (23) ಒಂದು ವರ್ಷ ಹಾಗೂ ಗಿರಿ ದೇವಜಿತ್‌ಗೆ (24) ಏಳು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ ಅಲ್ಲಿನ ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿದ್ದಂತೆ ಕ್ರೈಂ ಪ್ರಕರಣಗಳು ಕೂಡ ಹೆಚ್ಚಾಗಿವೆ. ತಂತ್ರಜ್ಞಾನ ಬಳಸಿಕೊಂಡು ಬ್ಯಾಂಕಿಗೆ ಕನ್ನ ಹಾಕಿದ್ದರಿಂದ ಇದೀಗ ವಿದ್ಯಾರ್ಥಿಗಳಿಗೆ ಜೈಲೂಟ ತಿನ್ನುವಂತಾಗಿದೆ. ಮಕ್ಕಳ ಈ ನಡೆಗೆ ಹೆತ್ತವರು ಬೇಸರ ವ್ಯಕ್ತಪಡಿಸಿರುವುದರ ಜೊತೆಗೆ ಜೈಲು ಪಾಲಾಗಿದ್ದರಿಂದ ನೋವುನ್ನನುಭವಿಸುವಂತಾಗಿದೆ.