CrimeDistricts

ಪ್ರಿಯಕರನಿಂದಲೇ ಪ್ರೇಯಸಿಯ ಬರ್ಬರ ಹತ್ಯೆ; ಹಾಸನದಲ್ಲಿ ದಾರುಣ ಘಟನೆ

ಹಾಸನ; ಹಾಸನದಲ್ಲಿ ದಾರುಣ ಕೃತ್ಯವೊಂದು ಎಸಗಲಾಗಿದೆ. ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

ಮೊಸಳೆಹೊಸಳ್ಳಿ ಇಂಜಿನಿಯರ್ ಕಾಲೇಜಿನಲ್ಲಿ ಬಿಇ‌ ಮ್ಯಾಕಾನಿಕಲ್ ಓದುತ್ತಿದ್ದ ಸುಚಿತ್ರಾ ಎಂಬಾಕೆಯೇ ಕೊಲೆಯಾದವಳು. ಆರೋಪಿ ತೇಜಸ್‌ ನಾಪತ್ತೆಯಾಗಿದ್ದಾರೆ. ಕೊಲೆಯಾದ ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳು ಎಂದು ತಿಳಿದುಬಂದಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದ್ರೆ ಕೊಲೆಗೆ ಕಾರಣ ಮಾತ್ರ ಗೊತ್ತಾಗಿಲ್ಲ.

ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post