International

ಉಕ್ರೇನ್‌ ಬಿಕ್ಕಟ್ಟು; ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿರುವುದರಿಂದ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ. ಭಾರತದಲ್ಲಿ ಇವತ್ತು ಒಂದೇ ದಿನ ಹತ್ತು ಗ್ರಾಂ ಚಿನ್ನದಕ್ಕೆ 2000 ರೂಪಾಯಿ ಏರಿಕೆಯಾಗಿದೆ. ಇನ್ನು ಕಚ್ಚಾ ತೈಲ ಬೆಲೆಯಲ್ಲೂ ಭಾರಿ ಏರಿಕೆ ಕಂಡಿದೆ. ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ಗೆ ಬರೋಬ್ಬರಿ ನೂರು ಡಾಲರ್‌ ಆಗಿದೆ. ಇನ್ನು ಯುದ್ಧದ ಕಾರಣದಿಂದಾಗಿ ರಸಗೊಬ್ಬರ ಪೂರೈಕೆಯಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share Post