ಸುಂದರಿಯರ ಕಂಕುಳಲ್ಲಿ ತಯಾರಾಗುತ್ತೆ ರೈಸ್ ಬಾಲ್!; ಬೆವರಲ್ಲಿ ತಯಾರಾಗೋ ಖಾದ್ಯಕ್ಕೆ ಫುಲ್ ಡಿಮ್ಯಾಂಡ್!
ಟೋಕಿಯೋ; ಜನರ ಕೆಲವರು ಅಭ್ಯಾಸ ವಾಕರಿಕೆ ತರಿಸುತ್ತವೆ.. ಕೆಲವರ ಆಹಾರ ಪದ್ಧತಿಗಳು ಜನ ಹಿಂಗೂ ಇರ್ತಾರಾ ಅನ್ನೋ ಭಾವನೆ ಮೂಡುತ್ತೆ.. ಅಲ್ಲೆಲ್ಲೋ ಚೀನಾದಲ್ಲಿ ಶಾಲಾ ಮಕ್ಕಳ ಮೂತ್ರದಲ್ಲಿ ಮೊಟ್ಟೆಗಳನ್ನು ಬೇಯಿಸಿ ತಿಂತಾರಂತೆ ಅಂತ ಕೇಳೋಕೆ ಅಸಹ್ಯವಾಗುತ್ತೆ.. ಇಂತಹ ಅಸಭ್ಯಗಳು ಜಗತ್ತಿನಾದ್ಯಂತ ಇವೆ.. ಜಪಾನ್‌ನಲ್ಲೂ ಕೂಡಾ ಇಂತಹದ್ದೊಂದು ವಿಚಿತ್ರವಾದ ಖಾದ್ಯ ಹೆಚ್ಚು ಜನಪ್ರಿಯವಾಗುತ್ತಿದೆ.. ಹೆಚ್ಚು ಹೆಚ್ಚು ಹಣ ಕೊಟ್ಟು ಜನ ಈ ಆಹಾರವನ್ನು ಖರೀದಿ ಮಾಡಿ ತಿನ್ನುತ್ತಿದ್ದಾರೆ.. ಈ ಖಾದ್ಯ ಹೇಗೆ ತಯಾರಾಗುತ್ತೆ ಅಂದ್ರೆ ನೀವು ಕೇಳಿದರೆ ಒಂದೆರಡು ಹೊತ್ತು ಊಟ ಮಾಡೋದನ್ನೇ ಬಿಡುತ್ತೀರಿ.. ಆದ್ರೆ ಜಪಾನ್‌ನ ಇದನ್ನು ಆಸ್ವಾಧಿಸಿ ತಿನ್ನುತ್ತಾರೆ.. ಅದರ ಓನಿಗಿರಿ.. ಅರ್ಥಾತ್ ರೈಸ್ ಬಾಲ್..
ನಮ್ಮಲ್ಲಿ ಅನ್ನದ ಉಂಡೆಗಳನ್ನು ಕಡುಬು ಅಂತ ಕರೀತೀವಿ.. ಇಂತಹ ಅನ್ನದ ಉಂಡೆಗಳನ್ನು ತಿನ್ನುವ ಪದ್ಧತಿ ಜಪಾನ್‌ಲ್ಲಿ ಕೂಡಾ ಅನಾದಿ ಕಾಲದಿಂದಲೂ ಇದೆ.. ಶತಮಾನಗಳ ಇತಿಹಾಸವಿರುವ ಈ ಖಾದ್ಯಕ್ಕೆ ಹೊಸ ಟಚ್ ನೀಡಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.. ಇದನ್ನು ತಿನ್ನಲು ಜನ ಮುಗಿ ಬೀಳುತ್ತಿದ್ದಾರೆ.. ಸಾಮಾನ್ಯ ಬೆಲೆಗಿಂತ ಹತ್ತು ಪಟ್ಟು ದುಬಾರಿ ಬೆಲೆ ಇದ್ದರೂ ಇದನ್ನು ತಿನ್ನಲು ಜನ ಇಷ್ಟಪಡುತ್ತಿದ್ದಾರೆ.. ಮುಗಿಬಿದ್ದು ಈ ರೈಸ್ ಬಾಲ್ ರುಚಿಯನ್ನು ಸವಿಯುತ್ತಿದ್ದಾರೆ..
ಸುಂದರಿಯರ ಕಂಕುಳಲ್ಲಿ ರೈಸ್ ಬಾಲ್ ತಯಾರಿ..!;
ಅಕ್ಕಿಯನ್ನು ಮುದ್ದೆ ರೀತಿ ಬೇಯಿಸಿ ಅದನ್ನು ಕೈನಿಂದ ನಾವು ಉಂಡೆಗಳನ್ನು ಕಟ್ಟುತ್ತೇವೆ.. ಆದ್ರೆ ಇಲ್ಲಿ ಸುಂದರ ಹುಡುಗಿಯರ ಕಂಕುಳಲ್ಲಿ ಅನ್ನವನ್ನಿಟ್ಟು ಅಲ್ಲಿ ಉಂಡೆಯನ್ನು ಕಟ್ಟಲಾಗುತ್ತದೆ.. ಸುಂದರಿಯರ ಕಂಕುಳಲ್ಲಿರುವ ಬೆವರು ಸೇರಿ ಆ ರೈಸ್ ಬಾಲ್ ತಯಾರಾಗುತ್ತೆ.. ಹುಡುಗಿಯರ ಬೆವರಿನಿಂದ ತಯಾರಾದ ಈ ಖಾದ್ಯ ಬಹಳ ರುಚಿಕರವಂತೆ… ಇದಕ್ಕಾಗಿಯೇ ಗ್ರಾಹಕರು ಇದನ್ನು ತಿನ್ನಲು ಇಷ್ಟಪಡುತ್ತಿದ್ದಾರೆ.. ಇತ್ತೀಚೆಗೆ ಜಪಾನ್‌ನಾದ್ಯಂತ ಇದು ಸಖತ್ ಫೇಮಸ್ ಖಾದ್ಯವಾಗಿದೆ.. ಬಹುತೇಕೆ ಎಲ್ಲಾ ರೆಸ್ಟೋರೆಂಟ್‌ಗಳಲ್ಲೂ ಇಂತಹದ್ದೊಂದು ಓನಿಗಿರಿ ಎಂಬ ರೈಸ್ ಬಾಲ್ ಖಾದ್ಯಕ್ಕಾಗಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ..
ರೈಸ್ ಬಾಲ್ ತಯಾರಿಸಲೆಂದೇ ಹುಡುಗಿಯರ ನೇಮಕ;
ಈ ವಿಚಿತ್ರ ಖಾದ್ಯ ತಯಾರಿಸಲು ಅಂದ್ರೆ ರೈಸ್ ಬಾಲ್ ಕಟ್ಟುವುದಕ್ಕಾಗಿಯೇ ರೆಸ್ಟೋರೆಂಟ್‌ಗಳು ಸುಂದರ ಹುಡುಗಿಯರನ್ನು ನೇಮಿಸಿಕೊಳ್ಳುತ್ತಿವೆ.. . ಈ ರೈಸ್ ಬಾಲ್ ತಯಾರಿಸುವ ಹುಡುಗಿಯರು ಸ್ವಚ್ಛತೆ ಕಾಪಾಡಬೇಕು.. ಕಂಕುಳಲ್ಲಿ ಕೂದಲು ಇಲ್ಲದಂತೆ ನೀಟ್ ಶೇವ್ ಮಾಡಬೇಕು.. ಜೊತೆಗೆ ದೇಹವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು.. ಅವರ ದೇಹ ಸೋಂಕು ರಹಿತವಾಗಿರಬೇಕು.. ಇವರು ಖಾದ್ಯವನ್ನು ತಯಾರಿಸಲು ಶುರು ಮಾಡುವುದಕ್ಕೂ ಮೊದಲು ಕಂಕುಳಲ್ಲಿ ಬೆವರು ಬರುವಂತೆ ಮಾಡಲು ವ್ಯಾಯಾಮ ಮಾಡುತ್ತಾರೆ.. ಕಂಕುಳಲ್ಲಿ ಬೆವರು ಉತ್ಪತ್ತಿಯಾಗುತ್ತಿದ್ದಂತೆ, ಬೇಯಿಸಿದ ರೈಸ್ ಖಾದ್ಯವನ್ನು ತೆಗೆದುಕೊಂಡು ಕಂಕುಳಲ್ಲಿಟ್ಟು ಉಂಡೆ ಕಟ್ಟಲು ಶುರು ಮಾಡುತ್ತಾರೆ..
ಮಾಂಸ, ಅಕ್ಕಿ, ತರಕಾರಿಯಿಂದ ತಯಾರಿ!;
ಈ ರೈಸ್ ಬಾಲ್‌ಗೆ ಮಾಂಸ, ಅಕ್ಕಿ ಹಾಗೂ ತರಕಾರಿಯನ್ನು ಬಳಸುತ್ತಾರೆ.. ಎಲ್ಲವನ್ನೂ ಸೇರಿಸಿ ಚೆನ್ನಾಗಿ ಬೇಯಿಸಲಾಗುತ್ತದೆ.. ನಂತರ ಅದು ಆರಿದ ಮೇಲೆ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕಂಕುಳಲ್ಲಿ ಇಟ್ಟು ಉಂಡೆ ಸುತ್ತಲಾಗುತ್ತದೆ.. ಹುಡುಗಿಯರ ಕಂಕುಳಲ್ಲಿ ಬೆವರು ಉತ್ಪತ್ತಿಯಾಗಿರುವುದರಿಂದ ಉಂಡೆ ಕಟ್ಟಲು ಚೆನ್ನಾಗಿ ಆಗುತ್ತದೆ.. ಹೀಗೆ ತಯಾರಿಸಲಾದ ಖಾದ್ಯ ಈ ಟ್ರೆಂಡ್ ಆಗುತ್ತಿದೆ.. ಇದು ಭಾರತಕ್ಕೆ ಬಂದರೂ ಬರಬಹುದು..