National

ಉಕ್ರೇನ್‌ನ ಎಲ್ಲಾ ವಾಯುನೆಲೆಗಳು ಬಂದ್: ಭಾರತಕ್ಕೆ ವಾಪಸಾದ ಏರ್‌ ಇಂಡಿಯಾ

ದೆಹಲಿ: ರಷ್ಯಾ ಉಕ್ರೇನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಈಗಾಗಲೇ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಹಿಂತಿರುಗುವಂತೆ ಪದೇ ಪದೇ ಸೂಚನೆ ನೀಡಿದೆ. ಈ ನಿಟ್ಟನಲ್ಲಿ ಕೆಲವು ವಿದ್ಯಾರ್ಥಿಗಳು ಮಂಗಳವಾರ ಭಾರತಕ್ಕೆ ಬಂದಿಳಿದಿದ್ದಾರೆ. ಇನ್ನು ಸಾವಿರಾರು  ಭಾರತೀಯ ವಿದ್ಯಾರ್ಥಿಗಳು ಅಲ್ಲಿಯೇ ಉಳಿದಿದ್ದಾರೆ. ಅವರನ್ನು ಕರೆತರಲು ಸರ್ಕಾರ ಏರ್‌ ಇಂಡಿಯಾ ವಿಮಾನ ಸೇವೆಯನ್ನು ನೀಡಿತ್ತು. ಈ ನಿಟ್ಟಿನಲ್ಲಿ ಇಂದು ಬೆಳಗಿನ ಜಾವ ಉಕ್ರೇನ್‌ಗೆ ತೆರಳಿದ್ದ ಏರ್‌ ಇಂಡಿಯಾ ದೆಹಲಿಗೆ ವಾಪಸಾಗಿದೆ. ಯುದ್ಧದ ಕಾರಣದಿಂದದಾಗಿ  ಉಕ್ರೇನ್ ಪೂರ್ವ ನಗರಗಳಲ್ಲಿ ವಾಯುನೆಲೆ ಸಂಪೂರ್ಣ ಸ್ತಬ್ಧವಾಗಿದೆ.  ನಾಗರೀಕ ವಿಮಾನಯಾನಕ್ಕಾಗಿ ವಾಯುಪ್ರದೇಶವನ್ನು ಬಳಸುವುದನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳ ನಾಗರಿಕರು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.

ಗುರುವಾರ (ಫೆಬ್ರವರಿ 24,2022) ಬೆಳಿಗ್ಗೆ, ಏರ್ ಇಂಡಿಯಾದ AI1947 ವಿಮಾನವು ಭಾರತೀಯರನ್ನು ಕರೆತರಲು ಪ್ರಯಾಣ ಬೆಳೆಸಿದೆ. ಉಕ್ರೇನ್‌ಗೆ ತೆರಳುತ್ತಿದ್ದಾಗ ಆ ದೇಶದಲ್ಲಿ ಹಠಾತ್ ಅನುಮತಿ ನಿರಾಕರಿಸಿದ ಕಾರಣದಿಂದಾಗಿ ಮತ್ತೆ ದೆಹಲಿಗೆ ಮರಳಿದೆ.

ವಿಮಾನವು ದೆಹಲಿಯಿಂದ ಹೊರಟ ನಂತರ ಉಕ್ರೇನಿಯನ್ ಅಧಿಕಾರಿಗಳು NOTAM (ಏರ್‌ಮೆನ್‌ಗಳಿಗೆ ಸೂಚನೆ) ನೀಡಿದರು.  “ಸಂಭವನೀಯ ಅಪಾಯದ ಕಾರಣದಿಂದಾಗಿ ನಾಗರಿಕ ವಿಮಾನಯಾನಕ್ಕೆ ನಿರ್ಬಂಧಿಸಲಾಗಿದೆ” ಎಂಬ ಆದೇಶವನ್ನು ನೀಡಿದೆ. ಉಕ್ರೇನ್‌ನ ಕೀವ್‌ನಿಂದ ಖಾಲಿಯಾಗಿ  ಏರ್ ಇಂಡಿಯಾ ವಿಮಾನವು  ದೆಹಲಿಗೆ ಬಂದಿದೆ.

ಕೀವ್‌ನಲ್ಲಿ ನೋಟಮ್ ನೀಡಿದ್ದರಿಂದ ಏರ್ ಇಂಡಿಯಾ ಫ್ಲೈಟ್ ಎಐ 1947 ಹಿಂತಿರುಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಏರ್ ಇಂಡಿಯಾ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (IGIA) ಬೆಳಿಗ್ಗೆ 7.30 ಕ್ಕೆ ಹೊರಟು ಕೀವ್‌ನ ಬೋರಿಸ್‌ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತ್ತು ಎನ್ನಲಾಗಿದೆ.

ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ವಿವಿಧ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ ಉಕ್ರೇನ್‌ನಲ್ಲಿರುವ ಭಾರತೀಯರ ಬಗ್ಗೆ ತಿಳಿದುಕೊಳ್ಳಲು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಕೆಲಸ ಮುಂದುವರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Share Post