ಫೆ 16 : ರಷ್ಯಾದಿಂದ ಉಕ್ರೇನ್ ಮೇಲೆ ಆಕ್ರಮಣ : ಉಕ್ರೇನ್ ಅಧ್ಯಕ್ಷ
ಕೈವ್ : ಫೆ 16, ಉಕ್ರೇನ್ ಮೇಲೆ ರಷ್ಯಾದಿಂದ ಆಕ್ರಮಣ ನಡೆಯುವ ದಿನ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ತಮ್ಮ ಸಾಮಾಜಿ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಅವರು ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ.
ಡಾನ್ಬಾಸ್ ಮತ್ತು ಕ್ರಿಮಿಯಾವನ್ನು ಸುಪರ್ದಿಗೆ ಪಡೆಯುವುದಾಗಿಯೂ ಹೇಳಿರುವ ಅವರು ಅದಕ್ಕಾಗಿ ರಾಜತಾಂತ್ರಿಕ ಮಾರ್ಗವನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಉಕ್ರೇನ್‌ನ ಮಿತ್ರ ರಾಷ್ಟ್ರವಾಗಿರು ಅಮೆರಿಕ ಪ್ರತಿಕ್ರಿಯೆ ನೀಡಿದೆ. ಆಕ್ರಮಣದ ನಿರ್ಧಾರವನ್ನು ರಷ್ಯಾ ಕೈಗೊಂಡಿದೆ ಎಂಬುದನ್ನು ನಾವು ನಂಬುವುದಿಲ್ಲ ಆದರೆ ಯಾವುದೇ ಸೂಚನೇ ಇಲ್ಲದೇ ದಾಳಿ ನಡೆಸಲೂಬಹುದು ಎಂದು ಹೇಳಿದೆ.
ಉಕ್ರೇನ್‌ಗೆ ನ್ಯಾಟೋ ಬೆಂಬಲವನ್ನು ವಿರೋಧಿಸಿರುವ ರಷ್ಯ, ಗಡಿಯಲ್ಲಿ ಸೇನೆಯನ್ನು ನಿಯೋಜಿಸಿದೆ..