International

ʻಒನ್‌ ವೆಬ್‌ ರಾಕೆಟ್‌ʼ ಉಡಾವಣೆ ಸ್ಥಗಿತಗೊಳಿಸಿದ ರಷ್ಯಾ:ಭಾಗಸ್ವಾಮ್ಯ ರಾಷ್ಟ್ರಗಳ ಧ್ವಜ ತೆರವು

ರಷ್ಯಾ: ಉಕ್ರೇನ್‌ ಮೇಲೆ ಯುದ್ದ ಸಾರಿರುವ ಕಾರಣ ರಷ್ಯಾ ವಿರುದ್ಧ ಅನೇಕ ದೇಶಗಳು ನಿರ್ಬಂಧಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ  ಪ್ರಸ್ತುತ ಇತರ ದೇಶಗಳೊಂದಿಗೆ ತನ್ನ ಒಪ್ಪಂದಗಳನ್ನು ಮುರಿಯಲು ರಷ್ಯಾ ನಿರ್ಧಾರ ಮಾಡಿದೆ. ಶುಕ್ರವಾರ ನಡೆಯಬೇಕಿದ್ದ ರಾಕೆಟ್ ಉಡಾವಣೆಯನ್ನು ರಷ್ಯಾ ಕೂಡ ಸ್ಥಗಿತಗೊಳಿಸಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ನೇತೃತ್ವದ “ಒನ್ ವೆಬ್ ರಾಕೆಟ್” ಉಡಾವಣೆಯನ್ನು ರಷ್ಯಾ ಸ್ಥಗಿತಗೊಳಿಸಿದೆ. ಪ್ರಯೋಗದಲ್ಲಿ ಭಾಗವಹಿಸುತ್ತಿದ್ದ ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಧ್ವಜಗಳನ್ನು ಸಹ ರೋಸ್ಕೋಸ್ಮೋಸ್ ತೆಗೆದುಹಾಕಿತು. ಈ ನಡುವೆ ಭಾರತ ಮತ್ತು ದಕ್ಷಿಣ ಕೊರಿಯಾ ಧ್ವಜಗಳನ್ನು ಮಾತ್ರ ಉಳಿಸಿರುವುದು ಕಂಡುಬಂದಿದೆ.

ಉಕ್ರೇನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ಆಯಾ ದೇಶಗಳು ರಷ್ಯಾದ ಮೇಲೆ ನಿರ್ಬಂಧ ಹೇರುತ್ತಿರುವುದೇ ಇದಕ್ಕೆ ಕಾರಣ. ರಷ್ಯಾದ ಸೋಯುಜ್ ರಾಕೆಟ್, ಕಜಕಿಸ್ತಾನದ ಬಿಕಾನೆರ್ ಕಾಸ್ಮೊಡ್ರೋಮ್ ಉಡಾವಣಾ ಕೇಂದ್ರದಿಂದ ವಿವಿಧ ದೇಶಗಳ 36 ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಜಪಾನ್‌ನ OneWeb ಭಾಗಸ್ವಾಮ್ಯದಲ್ಲಿ   ಪ್ರಪಂಚದಾದ್ಯಂತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಪಾಲುದಾರಿಕೆ ಮಾಡಿಕೊಂಡಿವೆ.ಇತರೆ ಬಾಹ್ಯಾಕಾಶ ಕಂಪನಿಗಳು ಈ ಯೋಜನೆಯಲ್ಲಿ ಪಾಲುದಾರರಾಗಿದ್ದಾರೆ. ಸೋಯುಜ್ ರಾಕೆಟ್‌ನಲ್ಲಿ ಇತರ ದೇಶಗಳ ಧ್ವಜಗಳನ್ನು ತೆಗೆದಿರುವುರಿಂದ ನಮ್ಮ ರಾಕೆಟ್‌ ಇನ್ನೂ ಅಂದವಾಗಿ ಕಾಣಿಸುತ್ತಿದೆ ಎಂದು  ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್‌ನ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್ ಪ್ರತಿಕ್ರಿಯಿಸಿದ್ದಾರೆ.

ರಷ್ಯಾ ಮೇಲೆ ಇತರ ದೇಶಗಳ ನಿರ್ಬಂಧಗಳ ಹಿನ್ನೆಲೆಯಲ್ಲಿ ಸಂಸ್ಥೆ ಈಗ ಮನಸ್ಸು ಬದಲಿಸಿದ್ದು, ರಾಕೆಟ್ ಉಡಾವಣೆ ಮಾಡದಿರಲು ನಿರ್ಧರಿಸಿದೆ. Roscosmos ರಾಕೆಟ್ ಅನ್ನು ಉಡಾವಣೆ ಮಾಡಲು ನಿರಾಕರಿಸಿದೆ. ವಿಶೇಷವಾಗಿ UK ಸರ್ಕಾರವು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳ ವಿರುದ್ಧವಾಗಿ ರಷ್ಯಾ ನಿರ್ಬಂಧ ಹಾಕಿದೆ. ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಒನ್ ವೆಬ್ ಆಧಾರಿತ ಉಪಗ್ರಹ ಇಂಟರ್ನೆಟ್ ಅನ್ನು ಬಳಸದಂತೆ ಕೇವಲ ಮಿಲಿಟರಿಯೇತರ ಬಳಕೆಗಾಗಿ ಇಂಟರ್ನೆಟ್ ಅನ್ನು ಬಳಸಲು ಬದ್ಧವಾಗಿದ್ದರೆ ಮಾತ್ರ ಈ ಪ್ರಯೋಗ ನಡೆಯುವುದಾಗ ರಷ್ಯಾ ಯುಕೆಗೆ ಅಲ್ಟಿಮೇಟಂ ಜಾರಿ ಮಾಡಿದೆ. ಈ ನಿರ್ಧಾರಕ್ಕೆ ಒಪ್ಪಿಕೊಂಡರೆ 48 ಗಂಟೆಗಳ ಒಳಗೆ ಪ್ರಯೋಗವನ್ನು ಪ್ರಾರಂಭಿಸುವುದಾಗಿ ರಷ್ಯಾ ಹೇಳಿದೆ.

Share Post