International

2021 – ದೇಶದಲ್ಲಿ ಲ್ಯಾಂಬರ್ಗಿನಿಯ ಎಷ್ಟು ಕಾರು ಮಾರಾಟವಾಗಿದೆ ಗೊತ್ತಾ ?

ನವದೆಹಲಿ : ಕೊರೊನಾ ಸಂಕಷ್ಟದ ನಡುವೆಯೂ ಲ್ಯಾಂಬರ್ಗಿನಿ ಕಾರ್‌ ಸಂಸ್ಥೆ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಇಟಲಿಯ ಸೂಪರ್‌ ಲಕ್ಷುರಿ ಕಾರ್‌ ತಯಾರಿಕಾ ಸಂಸ್ಥೆಯ ಲ್ಯಾಂಬರ್ಗಿನಿಯು ಕಳೆದ ವರ್ಷದ ಸೇಲ್ಸ್‌ನಲ್ಲಿ ಶೇ 86ರಷ್ಟು ಪ್ರಗತಿ ದಾಖಲಿಸಿದೆ.

ಈ ಸಾಧನೆ ಕುರಿತು ಲ್ಯಾಂಬರ್ಗಿನಿಯ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ. 2020ರ ಇಸವಿಯಲ್ಲಿ ಲ್ಯಾಂಬರ್ಗಿನಿ ಸಂಸ್ಥೆಯು ಭಾರತದಲ್ಲಿ ಒಟ್ಟು 37 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿತ್ತು.

ಆದರೆ 2021ರಲ್ಲಿ ಒಟ್ಟು 69 ಕಾರುಗಳನ್ನು ಮಾರಿರುವುದಾಗಿ ಹೇಳಿಕೊಂಡಿದೆ. ಇದರೊಂದಿಗೆ ಅವರ ಸೇಲ್ಸ್‌ ಶೇ86 ರಷ್ಟು ಪ್ರಗತಿ ಕಂಡಿದೆ. ಹೀಗಾಗಿ ಸಂಸ್ಥೆಯು ಮುಂದಿನ ದಿನಗಳಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ರೂಪಿಸಿದೆ.

ಭಾರತದ ರೂಪಾಯಿ ಮೌಲ್ಯದಲ್ಲಿ ಲ್ಯಾಂಬರ್ಗಿನಿ ಕಾರಿನ ಬೆಲೆ 3.16 ಕೋಟಿಯಿಂದ ಆರಂಭವಾಗುತ್ತದೆ. ಕೊರೊನಾ ಸಂಕಷ್ಟದ ನಡುವೆಯೂ ಲ್ಯಾಂಬರ್ಗಿನಿ ಸಂಸ್ಥೆ ಇಷ್ಟು ಕಾರುಗಳನ್ನು ಸೇಲ್‌ ಮಾಡಿದೆ ಎಂದರೆ ನಿಜಕ್ಕೂ ಅದು ಉತ್ತಮ ಬೆಳವಣಿಗೆ.

 

Share Post