International

ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಪುಟಿನ್:‌ ಉಕ್ರೇನ್‌ ಮೇಲೆ ಮುಂದುವರೆದ ಕದನ

ರಷ್ಯಾ:  ಉಕ್ರೇನ್‌ ಮೇಲೆ ರಷ್ಯಾ ಕದನ ಘೋಷಿಸಿ ಇಂದಿಗೆ 22 ದಿನ ಕಳೆದಿವೆ. ಸತತವಾಗಿ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಲೇ ಇದೆ ರಷ್ಯಾ. ಈಗಾಗಲೇ ಉಕ್ರೇನ್‌ನ ಪ್ರಮುಖ ನಗರಗಳನ್ನು ಸ್ಮಶಾನಗಳಾಗಿ ಪರಿವರ್ತಿಸಿರುವ ರಷ್ಯಾದ ಪಡೆಗಳು ಪ್ರಸ್ತುತ ಕೀವ್, ಖಾರ್ಕಿವ್ ಮತ್ತು ಪೋಲೆಂಡ್‌ನ ಮೇಲೆ ಕಡಿವಾಣ ಹಾಕುತ್ತಿವೆ. ರಷ್ಯಾ ಸೇನೆ ಕ್ಷಿಪಣಿಗಳು ಮತ್ತು ಬಾಂಬ್‌ಗಳ ಮೂಲಕ ಉಕ್ರೇನ್‌ ಮೇಲೆ ದಾಳಿ ಮುಂದುವರೆಸಿವೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವು ಪ್ರಮುಖ ಆದೇಶಗಳನ್ನು ನೀಡಿದೆ. ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಷ್ಯಾ ಆದೇಶಿಸಿದೆ. ದಾಳಿಯನ್ನು ನಿಲ್ಲಿಸುವುದರ ಜೊತೆಗೆ, ರಷ್ಯಾ ಪಡೆಗಳು ಅಥವಾ ಅದನ್ನು ಬೆಂಬಲಿಸುವ ಸಶಸ್ತ್ರ ಪಡೆಗಳು ಉಕ್ರೇನಿಯನ್ ಪ್ರದೇಶದ ಮೇಲೆ ಯಾವುದೇ ಮುಂದಿನ ಕ್ರಮವನ್ನು ತೆಗೆದುಕೊಳ್ಳದಂತೆ ಆದೇಶ ನೀಡಿದೆ.

ಈಗಾಗಲೇ ಹಲವು ಜೀವಗಳನ್ನು ಬಲಿ ಪಡೆದಿರುವ ಸೇನಾ ಕಾರ್ಯಾಚರಣೆಯಿಂದಾಗಿ ನಾಗರಿಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ. ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಷ್ಯಾ ಉಕ್ರೇನ್ ಆರೋಪಗಳನ್ನು ನಿರಾಕರಿಸಿದೆ, “ರಷ್ಯಾದ ಗುಪ್ತಚರ ಮಾಹಿತ ಪ್ರಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸಿರುವುದಾಗಿ ಮಾಹಿತಿ ತಿಳಿದುಬಂದಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜರ್ಮನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ರಷ್ಯಾ ಜೊತೆಗಿನ ಯುದ್ಧದಲ್ಲಿ ಸಹಕರಿಸಲು ಜರ್ಮನಿಗೆ ಝೆಲೆನ್ಸ್ಕಿ ಮನವಿ ಮಾಡಿದ್ರು. ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜರ್ಮನ್ ಸಂಸತ್ತಿಗೆ ವಿವರಿಸಲಾಯಿತು.

Share Post