International

ಖಾರ್ಕಿವ್‌ ಪ್ರದೇಶದ ಮೇಲೆ ರಷ್ಯಾ ನಿರಂತರ ದಾಳಿ; 24 ಗಂಟೆಯಲ್ಲಿ 34 ಮಂದಿ ಸಾವು

ಕೀವ್: ಉಕ್ರೇನ್‌ನ ಖಾರ್ಕಿವ್ ಪ್ರದೇಶದ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಕಳೆದ 24 ಗಂಟೆಯಲ್ಲೇ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉಕ್ರೇನ್‌ ಸರ್ಕಾರ ಗುರುವಾರ ದೃಢಪಡಿಸಿರುವುದಾಗಿ ಸುದ್ದಿಸಂಸ್ಥೆಯೊಂದು ಹೇಳಿದೆ.

ಉಕ್ರೇನ್‌ ನಗರಗಳ ಮೇಲೆ ರಷ್ಯಾದ ಸೇನಾಪಡೆಯು ಭೀಕರ ದಾಳಿ ನಡೆಸುತ್ತಿದೆ. ಉಕ್ರೇನ್‌ ಸೇನಾಪಡೆ ಮತ್ತು ಅಲ್ಲಿನ ನಾಗರಿಕರು ರಷ್ಯಾ ದಾಳಿಗೆ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದ ದಾಳಿಯನ್ನು ನಾವು ಕೊನೆಯವರೆಗೂ ಎದುರಿಸಲಿದ್ದೇವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ರಷ್ಯಾದ ಆಕ್ರಮಣದಿಂದಾಗಿ ಮರಿಯುಪೋಲ್ ನಗರದಲ್ಲಿ ವಿದ್ಯುತ್ ಹಾಗೂ ನೀರಿನ ಸರಬರಾಜು ಕಡಿತಗೊಂಡಿದೆ ಎಂದು ಉಕ್ರೇನ್‌ನ ತುರ್ತು ಸೇವಾ ವಿಭಾಗವು ಖಚಿತಪಡಿಸಿದೆ.  ಉಕ್ರೇನ್‌ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ 498 ಸೈನಿಕರು ಹತರಾಗಿದ್ದಾರೆ ಎಂದು ರಷ್ಯಾ ಒಪ್ಪಿಕೊಂಡಿದೆ.

Share Post