National

ಮೂರು ರಾಜಧಾನಿಗಳ ರದ್ಧತಿ ಕುರಿತು ಆಂಧ್ರ ಹೈಕೋರ್ಟ್‌ ತೀರ್ಪು-ಅಮರಾವತಿಯೇ ಆಂಧ್ರದ ರಾಜಧಾನಿ

ಆಂಧ್ರಪ್ರದೇಶ: ಮೂರು ರಾಜಧಾನಿಗಳನ್ನು ಮಾಡಬೇಕೆಂಬ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ತೀರ್ಮಾನಕ್ಕೆ ಹೈಕೋರ್ಟ್‌ ತಣ್ಣೀರೆರಚಿದೆ. ಒಂದು ರಾಜ್ಯಕ್ಕೆ ಒಂದೇ ರಾಜಧಾನಿ ಇರಬೇಕೆಂದು ಆಂಧ್ರಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದೆ. ಸರ್ಕಾರಕ್ಕೆ ಶಾಸಕಾಂಗ ಅಧಿಕಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸಿಆರ್‌ಡಿಎ ಕಾನೂನು ಪ್ರಕಾರ ನ್ಯಾಯ ಕೊಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ವಿವಿಧ ಅರ್ಜಿಗಳ ಮೇಲೆ ವಿಭಿನ್ನ ತೀರ್ಪುಗಳನ್ನು ಬಹಿರಂಗಪಡಿಸಿದೆ. ರೈತರಿಗೆ ಮೂರು ತಿಂಗಳಲ್ಲಿ ಪ್ಲಾಟ್ ಅಭಿವೃದ್ಧಿಪಡಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಅರ್ಜಿದಾರರಿಗೆ ಸರ್ಕಾರ 50 ಲಕ್ಷ ರೂ ನೀಡುವಂತೆ ಆದೇಶ ನೀಡಿದೆ.

ಹೈಕೋರ್ಟ್ ಆದೇಶ:-
– ರಾಜ್ಯ ಸರ್ಕಾರ ಸಿಆರ್ ಡಿಎ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು.
– ಒಪ್ಪಂದದ ಪ್ರಕಾರ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಬೇಕು.
– ಮೂರು ತಿಂಗಳೊಳಗೆ ನಿವೇಶನವನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡಬೇಕು.
– ಕಾಲಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳ ವರದಿ.
– ಭೂಮಿಯನ್ನು ರಾಜಧಾನಿಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು.
– ಇತರೆ ಉದ್ದೇಶಗಳಿಗಾಗಿ ಜಮೀನುಗಳನ್ನು ಅಡಮಾನ ಇಡುವಂತಿಲ್ಲ.

ಎಪಿ ರಾಜಧಾನಿ ವಿಚಾರದಲ್ಲಿ ಅಧಿಕಾರಕ್ಕೆ ಬಂದ ಸಿಎಂ ಜಗನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ವಿಶಾಖಪಟ್ಟಣಂ ಆಡಳಿತ, ಅಮರಾವತಿ ಶಾಸಕಾಂಗ ಮತ್ತು ಕರ್ನೂಲ್ ಅನ್ನು ಕಾನೂನು ರಾಜಧಾನಿಗಳಾಗಿ ಮಾಡಬೇಕೆಂದು ತೀರ್ಮಾನ ಮಾಡಿದ್ರು. ವಿಶಾಖಪಟ್ಟಣದಲ್ಲಿ ಸೆಕ್ರೆಟರಿಯೇಟ್ ಮತ್ತು ರಾಜ್ಯಪಾಲರ ಕಚೇರಿ, ಅಮರಾವತಿಯಲ್ಲಿ ವಿಧಾನಸಭೆ ಮತ್ತು ಕರ್ನೂಲ್‌ನಲ್ಲಿ ಹೈಕೋರ್ಟ್ ಸ್ಥಾಪನೆಯಾಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳು ದಾಖಲಾಗಿದ್ದವು. ಈ ಹಿನ್ನಲೆಯಲ್ಲಿಇತ್ತೀಚೆಗಷ್ಟೇ ನಡೆದ ಎಪಿ ಅಸೆಂಬ್ಲಿ ಸಭೆಯಲ್ಲಿ ಸಿಎಂ ಜಗನ್ ಸಂಚಲನದ ನಿರ್ಧಾರ ಕೈಗೊಂಡರು. “ಜನರ ಹಿತಾಸಕ್ತಿಗಳನ್ನು ಕಾಪಾಡಲು ನಾವು 3 ರಾಜಧಾನಿಗಳ ಮಸೂದೆಯನ್ನು ಹಿಂಪಡೆಯುತ್ತಿದ್ದೇವೆ” ಎಂದರು ಇನ್ನೂ ಉತ್ತಮ ಪ್ರಸ್ತಾವನೆಗಳೊಂದಿಗೆ ಹೊಸ ಮಸೂದೆಯನ್ನು ಸದನ ಮುಂದಿಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

 

Share Post