ಅಮೆರಿಕದಲ್ಲಿ ಪ್ಯಾಲೆಸ್ತೀನಿ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ
ಅಮೆರಿಕದ ವರ್ಮೊಂಟ್ ವಿಶ್ವವಿದ್ಯಾಲಯದ ಬಳಿ ಮೂವರು ಪ್ಯಾಲೆಸ್ತೀನ್ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಶನಿವಾರ ರಾತ್ರಿ ವರ್ಮೊಂಟ್‌ನ ಬರ್ಲಿಂಗ್‌ಟನ್‌ನಲ್ಲಿ ಕುಟುಂಬದೊಂದಿಗೆ ಊಟಕ್ಕೆ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ.
ಹಾಶಿಮ್ ಅವರ್ತಾನಿ, ತಹಸೀನ್ ಅಹ್ಮದ್ ಮತ್ತು ಕಿನ್ನನ್ ಅಬ್ದುಲ್ ಹಮಿದ್ ಅವರನ್ನು ವರ್ಮೊಂಟ್ ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ವ್ಯಕ್ತಿಯೊಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಬರ್ಲಿಂಗ್ಟನ್ ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಾಳಿಯ ಸಮಯದಲ್ಲಿ, ಅವರು ಸಾಂಪ್ರದಾಯಿಕ ತಲೆ ಸ್ಕಾರ್ಫ್ ‘ಕೆಫಿಯೆಹ್’ ಧರಿಸಿದ್ದರು ಮತ್ತು ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದರು.
ಗುಂಡು ಹಾರಿಸಿದ ನಂತರ ಶಂಕಿತ ವ್ಯಕ್ತಿ ಅಲ್ಲಿಂದ ಹೊರನಡೆದಿದ್ದಾನೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ದಾಳಿಯನ್ನು ದ್ವೇಷದ ಅಪರಾಧವೆಂದು ಪರಿಗಣಿಸಬೇಕೆಂದು ಸಂತ್ರಸ್ತರ ಕುಟುಂಬಗಳು ಬಯಸುತ್ತವೆ.