CrimeInternational

ಬಸ್‌ನಿಂದ ಕೆಳಗಿಳಿಸಿ 23 ಮಂದಿಯನ್ನು ಗುಂಡಿಕ್ಕಿ ಕೊಂದ ಉಗ್ರರು!

ಇಸ್ಲಾಮಾಬಾದ್‌(Pakistan); ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಕೆಳಗಿಳಿಸಿ ಗುಂಡಿಕ್ಕಿ 23 ಮಂದಿಯನ್ನು ಕೊಲೆ ಮಾಡಿರುವ ದಾರುಣ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ.. ಬಂದೂಕುದಾರಿ ಉಗ್ರರು ಬಸ್‌ ನಿಲ್ಲಿಸಿ ಅದರಲ್ಲಿದ್ದವರನ್ನು ಕೆಳಗಿಳಿಸಿ ಗುರುತಿನ ಚೀಟಿ ಕೇಳಿದ್ದಾರೆ.. ನಂತರ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ದೇಶಕ್ಕೆ ಹೊಸ ಪ್ರಧಾನಿ ಬರ್ತಾರಾ..?; ಹೊಸ ಚರ್ಚೆ ಹುಟ್ಟುಹಾಕ್ತಿರೋದು ಯಾಕೆ..?

ರಾರಶಮ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತರೆಲ್ಲರೂ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದವರು ಎಂದು ಗೊತ್ತಾಗಿದೆ.. ಇದಲ್ಲದೆ ಹಲವು ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.. ಸ್ಥಳದಿಂದ ಹೊರಡುವ ಮೊದಲ ದುಷ್ಕರ್ಮಿಗಳು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ..
ಕಳೆದ ಏಪ್ರಿಲ್‌ ನಲ್ಲಿ ಕೂಡಾ ಪಂಜಾಬ್‌ ಪ್ರಾಂತ್ಯದವರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು.. ಅಂದು 9 ಮಂದಿಯನ್ನು ಇದೇ ರೀತಿ ಬಸ್‌ನಿಂದ ಕೆಳಗಿಳಿಸಿ ಕೊಲೆ ಮಾಡಲಾಗಿತ್ತು.. ಕಳೆದ ವರ್ಷ ಕೂಡಾ ಆರು ಕಾರ್ಮಿಕರನ್ನು ಕೊಲೆ ಮಾಡಲಾಗಿತ್ತು..

ಇದನ್ನೂ ಓದಿ; ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ ವಿಚಾರ; ಏಳು ಅಧಿಕಾರಿಗಳು ಸಸ್ಪೆಂಡ್‌

Share Post