ಮೆಕ್ಕಾದಲ್ಲಿ 52 ಡಿಗ್ರಿ ತಾಪಮಾನ; ಬಿಸಿಲು ತಾಳಲಾರದೆ 550 ಮಂದಿ ಸಾವು!!
ಮೆಕ್ಕಾ; ಹಜ್ ಯಾತ್ರೆ ಜೂನ್ 14ರಿಂದ ಪ್ರಾರಂಭವಾಗಿದ್ದು, ಲಕ್ಷಾಂತರ ಜನರು ಮೆಕ್ಕಾ ಯಾತ್ರೆ ಮಾಡುತ್ತಿದ್ದಾರೆ.. ಆದ್ರೆ ಮೆಕ್ಕಾದಲ್ಲಿ ತಾಪಮಾನ ಹೆಚ್ಚಾಗಿದ್ದು, ಜನರು ಬಿಸಿಲಿಗೆ ತಡೆಯಲಾಗದೇ ಸಾವನ್ನಪ್ಪುತ್ತಾರೆ.. ಇದುವರೆಗೆ ಸುಮಾರು 550 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.. ಮೆಕ್ಕಾದಲ್ಲಿ ತಾಪಮಾನ 52 ಡಿಗ್ರಿ ತಲುಪಿದೆ ಎಂದು ತಿಳಿದುಬಂದಿದೆ..
ಮೆಕ್ಕಾ ಮುಸ್ಲಿಂ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿವರ್ಷ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿಗೆ ಬರುತ್ತಾರೆ.. ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕೆಂಬ ಮಹದಾಸೆ ಮುಸ್ಲಿಮರಲ್ಲಿದೆ.. ಈ ಬಾರಿ ಸೆಕೆ ಹೆಚ್ಚಿದ್ದರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.. ಆದ್ರೆ ತಾಪಮಾನಕ್ಕೆ ತಡೆಯಲಾಗದೆ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದುಬಂದಿದೆ..
ಮೃತರಲ್ಲಿ ಬಹುತೇಕರು ಈಜಿಪ್ಟ್ ನಾಗರಿಕರು ಎಂದು ಹೇಳಲಾಗುತ್ತಿದೆ.. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸೌದಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.. ಆದರೂ ಕೂಡಾ ಇಲ್ಲಿ ಯಾತ್ರಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ..
2015ರಲ್ಲಿ ಇಲ್ಲಿ ಭಾರಿ ಕಾಲ್ತುಳಿತ ಉಂಟಾಗಿತ್ತು.. ಆ ವೇಳೆ ಸುಮಾರು 2400 ಮಂದಿ ಸಾವನ್ನಪ್ಪಿದ್ದರು..