HealthInternational

ಪುರುಷ ನರ್ಸ್‌ಗಳು ಲಕ್ಷ ಲಕ್ಷ ಸಂಬಳ ಪಡೆಯುವ ಅವಕಾಶ; ಇಂದೇ ಅರ್ಜಿ ಸಲ್ಲಿಸಿ..

ಬೆಂಗಳೂರು; ಯುಎಇಯಲ್ಲಿ ರಾಜ್ಯದ ಪುರುಷ ನರ್ಸ್‌ಗಳಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.. ಡಿಒಎಚ್ ಪಾಸ್ ಅಥವಾ ಲೈಸೆನ್ಸ್ ಹೊಂದಿರುವ ಪುರುಷ ನರ್ಸ್‌ಗಳು ‘ಇಂಟರ್‌ನ್ಯಾಷನಲ್ ಮೈಗ್ರೇಷನ್ ಸೆಂಟರ್ ಕರ್ನಾಟಕ’ನ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.. ಇದರಲ್ಲಿ ಆಯ್ಕೆಯಾದವರಿಗೆ ತಿಂಗಳಿಗೆ 1.11 ಲಕ್ಷ ರೂಪಾಯಿ ಸಂಬಳ ದೊರೆಯಲಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಅನರ್ಹತೆ ನಂತರ ಕುಸ್ತಿಗೆ ವಿದಾಯ ಹೇಳಿದ ವಿನೇಶ್‌ ಫೋಗಟ್‌!

40 ವರ್ಷದ ಮೀರದ ಹಾಗೂ ಕನಿಷ್ಟ ಎರಡು ವರ್ಷ ಅನುಭವ ಹೊಂದಿರುವವರು ಈ ಅರ್ಜಿ ಸಲ್ಲಿಸಬಹುದು.. ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಇರಬೇಕಾಗುತ್ತದೆ. ಐಎ ಎಂಸಿಕೆ ವೆಬ್‌ಸೈಟ್ http://imck.kaushalkar.com ನಲ್ಲಿ ನೋದಣಿ ಮಾಡಿಸಬಹುದು, ಅಥವಾ hr.imck@ gmail.com ಈ ಮೇಲ್​ ಮಾಡಬಹುದು. ಸಂದರ್ಶನದ ದಿನಾಂಕವನ್ನು ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುತ್ತದೆ..
ವಾಟ್ಸ್ ಅಪ್ ಮೂಲಕವೂ (9606492213/ 9606492214) ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ; ಅನುದಾನಿತ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ; ನೇಮಕಾತಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌

Share Post