ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ; ಯಾವುದೇ ಹಾನಿ ಇಲ್ಲ
ಜಕಾರ್ತಾ; ಪೂರ್ವ ಇಂಡೋನೇಷ್ಯಾದ ಉತ್ತರ ಮಲುಕು ಎಂಬಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪನ ಆಗಿದೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಯಾವುದೇ ಸಾವು–ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಯಾವ ಕಟ್ಟಡಕ್ಕೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಇಂದು ಮುಂಜಾನೆ 03:02ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅದರ ಕೇಂದ್ರಬಿಂದುವನ್ನು ಮೊರೊಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ.ಮೀ ದೂರದಲ್ಲಿ ಗುರುತಿಸಲಾಗಿದೆ. ಸಮುದ್ರತಳದ 112 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಗುರುತು ಮಾಡಲಾಗಿದೆ. ಆದರೆ, ಸುನಾಮಿ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ದೇಶದ ಹವಾಮಾನ ಇಲಾಖೆ ಹೇಳಿದೆ.