InternationalScienceTechTechnology

ಚಂದ್ರಯಾನ-3 ಮತ್ತೊಂದು ಸಿಹಿ ಸುದ್ದಿ; ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್​ ಲ್ಯಾಂಡರ್

ದೆಹಲಿ; ಚಂದ್ರಯಾನ-3 ದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಚಂದ್ರಯಾನ ನೌಕೆ ಮತ್ತೊಂದು ಮಹತ್ವದ ಹಂತ ತಲುಪಿದೆ. ಚಂದ್ರನಿಗೆ ಹತ್ತಿರವಾಗಿರುವ ಚಂದ್ರಯಾನ ನೌಕೆ ಇಂದು ಮತ್ತೊಂದು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ,

ಇಂದು ಮಧ್ಯಾಹ್ನ 1 ಗಂಟೆಗೆ ನೌಕೆಯಿಂದ ಯಶಸ್ವಿಯಾಗಿ ವಿಕ್ರಮ್​ ಲ್ಯಾಂಡರ್ ಬೇರ್ಪಟ್ಟಿದೆ. ಇನ್ನು ಈ ಲ್ಯಾಂಡರ್ ಪ್ರತ್ಯೇಕವಾಗಿ ಚಂದ್ರನ ಕಕ್ಷೆಯಲ್ಲಿ ಸಂಚಾರ ಮಾಡುತ್ತದೆ. ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಮ್​ ಲ್ಯಾಂಡರ್ ತೆರಳುತ್ತಿದೆ. ಆಗಸ್ಟ್‌ 23ರಂದು ಅದನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

Share Post