International

ಉತ್ತರಕೊರಿಯಾ ಕಿಮ್‌ ಕ್ಷಿಪಣಿ ಪ್ರಯೋಗ: ಆತಂಕದಲ್ಲಿ ಜಪಾನ್‌, ಅಮೆರಿಕಾ

ಉತ್ತರಕೊರಿಯಾ:  ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕ್ರಮವನ್ನು ಖಂಡಿಸಿ NATO ನಾಯಕರು ಸಭೆ ನಡೆಸುತ್ತಿದ್ದಂತೆ,  ಉತ್ತರ ಕೊರಿಯಾ ಕಿಮ್‌ ಖಂಡಾಂತರ ಕ್ಷಿಪಣಿ, ಹ್ವಾಸಾಂಗ್-17 ICBM ಅನ್ನು ಉಡಾಯಿಸಿದ್ದಾನೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ. ಈ ಕ್ಷಿಪಣಿ  ದೂರದ ಗುರಿಯನ್ನು ಸುಲಭವಾಗಿ ತಲುಪಬಲ್ಲ ಅಮೆರಿಕದ ಯಾವುದೇ ಭಾಗಕ್ಕೆ ಅಪ್ಪಳಿಸಬಲ್ಲದು ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ರಾಕ್ಷಸ ಕ್ಷಿಪಣಿ ಎಂದು ವರ್ಣಿಸಲಾಗಿದೆ. ದೇಶದ ಭದ್ರತೆಯ ಭಾಗವಾಗಿ ಪರಮಾಣು ಯುದ್ಧವನ್ನು ತಡೆಯಲು ಕಿಮ್‌ನ ಪ್ರಯತ್ನ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಕೊರಿಯಾ ಕೂಡ ಹಲವಾರು ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ತಕ್ಕ ಉತ್ತರ ನೀಡಿದೆ.  ಇದೀಗ  ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ತೀವ್ರ ಕಳವಳ ವ್ಯಕ್ತಪಡಿಸಿವೆ. ಜಪಾನ್ ಇದನ್ನು ಕ್ಷಮಿಸಲಾಗದ ಪ್ರಯೋಗ ಎಂದು ಕರೆದಿದೆ. ಉತ್ತರ ಕೊರಿಯಾದ ಈ ನಿರ್ಧಾರ ಕ್ಷಮಿಸಲಾರದಂಥದ್ದು ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ, ಯುಎನ್ ಸೆಕ್ಯುರಿಟಿ ಕೌನ್ಸಿಲ್  ನಿರ್ಣಯಗಳನ್ನು ಉತ್ತರ ಕೊರಿಯಾ ಧಿಕ್ಕರಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.

ಈ ಕ್ಷಿಪಣಿಗೆ ಇದು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. 2022 ರ ಆರಂಭದಿಂದಲೂ ಉತ್ತರ ಕೊರಿಯಾ ಸರಣಿ ಪರಮಾಣು ಪರೀಕ್ಷೆಗಳೊಂದಿಗೆ ತನ್ನ ಬಲವನ್ನು ಹೆಚ್ಚಿಸಿದೆ. ಕಳೆದ ಐದು ವರ್ಷಗಳಲ್ಲಿ ICBM ಕ್ಷಿಪಣಿಯನ್ನು ಉಡಾವಣೆ ಮಾಡಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಇದನ್ನು ಉತ್ತರ ಕೊರಿಯಾ 2017 ರಲ್ಲಿ ಕೊನೆಯದಾಗಿ ಪರೀಕ್ಷಿಸಿತ್ತು. ದಕ್ಷಿಣ ಕೊರಿಯಾದ ಸೇನಾ ಮೂಲಗಳ ಪ್ರಕಾರ ಗುರುವಾರ (ಮಾರ್ಚ್ 24,2022) ಉಡಾವಣೆಯಾದ ಕ್ಷಿಪಣಿಯು 1,080 ಕಿಲೋಮೀಟರ್ ಕ್ರಮಿಸಿ ಜಪಾನಿನ ನೀರಿನಲ್ಲಿ ಬಿದ್ದಿದೆ ಎನ್ನಲಾಗ್ತಿದೆ.

ಇದು ಅತ್ಯಂತ ಶಕ್ತಿಯುತವಾಗಿತ್ತು ಮತ್ತು ಸುಮಾರು 6,200 ಕಿಲೋಮೀಟರ್ ಎತ್ತರಕ್ಕೆ ಹೋಗಬಲ್ಲ ಸಾಮರ್ಥ್ಯ ಇದೆ ಎಂದು ತಜ್ಞರು ಹೇಳಿದ್ದಾರೆ. ಸುಮಾರು 71 ನಿಮಿಷಗಳ ಕಾಲ ಗಾಳಿಯಲ್ಲಿ ಇರುತ್ತದೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಪರಮಾಣು ರಾಷ್ಟ್ರವೆಂದು ಗುರುತಿಸಬೇಕು ಮತ್ತು ನಮ್ಮ ವಿರುದ್ಧ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಉತ್ತರ ಕೊರಿಯಾ ಒತ್ತಾಯ ಮಾಡಿದೆ. ಅದರ ಭಾಗವಾಗಿಯೇ ಈ ಕ್ಷಿಪಣಿ ಪ್ರಯೋಗ ಮಾಡಿದ್ದಾರೆ ಎನ್ನಲಾಗುತ್ತಿದೆ.

Share Post