International

UKRAINE-RUSSIA; ಖಾಸಗಿ ಸುದ್ದಿ ವಾಹಿನಿ ವರದಿಗಾರನ ಮೇಲೆ ಗುಂಡಿನ ಮೊರೆತ

ಕೀವ್‌; ಉಕ್ರೇನ್‌ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ರಷ್ಯಾ ಹಾಗೂ ಉಕ್ರೇನ್‌ ಎರಡೂ ಕಡೆಯ ಸೈನಿಕರು ರಣಾಂಗಣದಲ್ಲಿ ಆರ್ಭಟಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ಖಾಸಗಿ ಸುದ್ದಿವಾಹಿನಿ ಸಿಬ್ಬಂದಿ ಮೇಲೆ ಗುಂಡಿ ದಾಳಿ ನಡೆದಿದೆ. ವಾಹಿನಿಯೊಂದರ ವರದಿಗಾರ ಲೈವ್‌ ರಿಪೋರ್ಟಿಂಗ್‌ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ.

 

ಘಟನೆಯಲ್ಲಿ ಖಾಸಗಿ ಸುದ್ದಿ ವಾಹಿನಿಯ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ.

 

 

Share Post