International

ವಿಷಸರ್ಪದೊಂದಿಗೆ ಮಾನವನ ಮಿತ್ರ ಪ್ರೇಮ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ವಿಡಿಯೋಗಳಿಗೇನು ಕಮ್ಮಿ ಇಲ್ಲ. ಚಿತ್ರ -ವಿಚಿತ್ರ, ವಿಶಿಷ್ಟ-ವಿಶೇಷ  ಏನೇ  ಕಂಡ್ರೂ ನಮ್ಮ ಜನ ಮೊಬೈಲ್‌ ತೆಗೆದುಕೊಂಡು ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿಬಿಡ್ತಾರೆ. ಅದರಲ್ಲಿ ಒಂದು ಅಪರೂಪದ ವಿಡಿಯೋ ವೈರಲ್‌ ಆಗಿದೆ. ಸಾಮಾನ್ಯವಾಗಿ ಮನುಷ್ಯ ನಾಯಿ, ಬೆಕ್ಕು, ಹಸು, ಎಮ್ಮೆಯಂತಹ ಸಾಧು ಪ್ರಾಣಿಗಳಿಗೆ ಸ್ನಾನ ಮಾಡಿಸುವುದು ಹೊಸದೇನಲ್ಲ..

ವಿಷ ಜಂತುಗಳಿಗೆ ಸ್ನಾನ ಮಾಡಿಸುವವನ್ನು ಎಂದಾದ್ರೂ ನೋಡಿದ್ದೀರಾ? ಹಾವು ಕಂಡ್ರೆ ಕಿಲೋ ಮೀಟರ್‌ ದೂರ ಓಡುವವರಿದ್ದಾರೆ. ಆದ್ರೆ ಇಲ್ಲೊಬ್ಬ ಭೂಪ ಹಾವಿಗೆ ಸ್ನಾನ ಮಾಡಿಸುವುದನ್ನು ನೋಡಿದ್ರೆ ಎದೆ ಝಲ್‌ ಅನ್ನುತ್ತೆ. ಹಸು, ನಾಯಿಗೆ ಸ್ನಾನ ಮಾಡಿಸುವ ಹಾಗೆ ಶಾಂಪೂ ತೆಗೆದುಕೊಂಡು ಹಾವಿನ ಮೈಯೆಲ್ಲ ಸವರಿ ಸ್ನಾನ ಮಾಡಿಸಿದ್ದಾನೆ. ಹಾವು ಕೂಡ ಆಕಡೆ ಈ ಕಡೆ ತೆವಳುತ್ತಾ ತನ್ನ ಯಜಮಾನನೊಂದಿಗೆ ಸರಸವಾಡುತ್ತಿದೆ. ಆತನ ಮೈಮೇಲೆ ಹತ್ತಿ ಇಳಿದು ಓಡಾಡುತ್ತಾ ಸ್ನಾನಕ್ಕೆ ಮೈಯೊಡ್ಡಿದೆ.

ಅಂತೂ ಪ್ರೀತಿ ಮಾಡಿದ್ರೆ ಯಾವುದೇ ಪ್ರಾಣಿ ಕೂಡ ಹಾನಿ ಮಾಡದೆ ಪ್ರೀತಿಯಿಂದ ಇರುತ್ತದೆ ಎಂಬುದಕ್ಕೆ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.

Share Post