HealthLifestyle

ವಾಕಿಂಗ್‌ ಮಾಡುವಾಗ ರಿವರ್ಸ್‌ ನಡೆದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..?

ಮಾರ್ನಿಂಗ್‌ ವಾಕಿಂಗ್‌ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲಾ ವೈದ್ಯರೂ ಹೇಳುತ್ತಾರೆ.. ಮನುಷ್ಯ ಆರೋಗ್ಯವಾಗಿರಬೇಕು ಎಂದಾದರೆ ಒಬ್ಬ ಮನುಷ್ಯ ದಿನಕ್ಕೆ ಕನಿಷ್ಠ ಹತ್ತು ಸಾವಿರ ಹೆಜ್ಜೆಗಳನ್ನು ನಡೆಯಬೇಕಂತೆ.. ಹೀಗಾಗಿಯೇ ಬೆಳಗ್ಗೆ  ಎದ್ದ ತಕ್ಷಣ ಕೆಲವರು ವಾಕಿಂಗ್‌ ಮಾಡುತ್ತಿರುತ್ತಾರೆ.. ಈ ಅಭ್ಯಾಸವನ್ನು ಎಲ್ಲರೂ ಅಳವಡಿಸಿಕೊಂಡರೆ ಒಳ್ಳೆಯದು..

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ರಿವರ್ಸ್‌ ವಾಕಿಂಗ್‌ ತುಂಬಾನೇ ಒಳ್ಳೆಯದಂತೆ;

ವಾಕಿಂಗ್‌ ಅಂದ್ರೆ ಕೆಲವರು ಸ್ಫಿಡಾಗಿ ನಡೆಯುತ್ತಾರೆ.. ಕೆಲವರು ನಿಧಾನವಾಗಿ ನಡೆಯುತ್ತಾರೆ.. ಹೇಗೆ ನಡೆಯಬೇಕೆಂಬ ಸಲಹೆಗಳು ಕೂಡಾ ವಿಭಿನ್ನವಾಗಿರುತ್ತವೆ.. ಒಟ್ಟಿನಲ್ಲಿ ಬೆಳಗ್ಗೆ ಸಮಯದಲ್ಲಿ ವಾಕಿಂಗ್‌ ಮಾಡಿದರೆ ದೇಹಕ್ಕೆ ತುಂಬಾನೇ ಒಳ್ಳೆಯದು.. ಇನ್ನು ಬೆಳಗ್ಗೆ ವಾಕಿಂಗ್‌ ಮಾಡುವ ನೀವು ಕೆಲ ಸಮಯ ಹಿಮ್ಮುಖ ವಾಕಿಂಗ್‌ ಅಂದರೆ ರಿವರ್ಸ್‌ ವಾಕಿಂಗ್‌ ಮಾಡಿದರೆ ನಿಮಗೆ ಇನ್ನಷ್ಟು ಆರೋಗ್ಯ ಅನುಕೂಲಗಳಾಗುತ್ತವಂತೆ.. ಹಿಮ್ಮುಖ ನಡಿಗೆ ಅಂದರೆ ಸಾಮಾನ್ಯ ನಡಿಗೆ ಬದಲು ಹಿಮ್ಮುಖವಾಗಿ ನಡೆಯುವುದು.. ಹಿಮ್ಮುಖವಾಗಿ ನಡೆಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಮೊಣಕಾಲು ಸ್ನಾಯುಗಳು ದೃಢವಾಗುತ್ತವೆ;

ಬೆಳಗ್ಗೆ ವಾಕಿಂಗ್‌ ಮಾಡುವ ಸಮಯದಲ್ಲಿ ಕೆಲಕಾಲ ಹಿಮ್ಮುಖವಾಗಿ ನಡೆಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.. ನಿಯಮಿತವಾಗಿ ಈ ರಿವರ್ಸ್ ವಾಕಿಂಗ್ ಮಾಡುವುದರಿಂದ ಮೊಣಕಾಲು ಮತ್ತು ಕಾಲುಗಳ ಹಿಂಭಾಗದಲ್ಲಿರುವ ಸ್ನಾಯುಗಳು ದೃಢವಾಗುತ್ತವೆ.. ಅಲ್ಲದೆ, ದೇಹದ ಸಮತೋಲನವನ್ನು ಸುಧಾರಿಸಲು ಕೂಡಾ ಈ ಹಿಮ್ಮುಖ ಚಲನೆ ಸಹಾಯ ಮಾಡುತ್ತದೆ. ಬೆನ್ನುನೋವಿನಿಂದ ಬಳಲುತ್ತಿರುವವರಿಗೆ ಇದು ತುಂಬಾನೇ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರಿವರ್ಸ್ ವಾಕಿಂಗ್ ಮನುಷ್ಯನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.. ಇದರ ಜೊತೆಗೆ ಸ್ನಾಯುಗಳನ್ನು ದೃಢವಾಗಿ ಮಾಡುತ್ತದೆ..

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

ದೇಹ ಹಾಗೂ ಮನಸ್ಸಿಗೆ ಹೆಚ್ಚು ಪ್ರಯೋಜನ;

ಹಿಮ್ಮುಖವಾಗಿ ನಡೆಯುವುದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ… ನಮ್ಮ ದೇಹದ ಬಗ್ಗೆ ನಮಗೆ ಹೆಚ್ಚು ಅರಿವು ಕೂಡಾ ಮೂಡಿಸುತ್ತದೆ.. ನೇರ ನಡಿಗೆಯ ಜೊತೆಗೆ, ರಿವರ್ಸ್ ವಾಕಿಂಗ್ ನಿಮ್ಮ ದೇಹ ಮತ್ತು ಮನಸ್ಸಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ಮನಸ್ಸು ಮತ್ತು ದೇಹದ ನಡುವೆ ಉತ್ತಮ ಸಮತೋಲನವನ್ನು ಸೃಷ್ಟಿಸುತ್ತದೆ. ಆದರೆ ಹಿಮ್ಮುಖವಾಗಿ ನಡೆಯುವಾಗ ನಿಮ್ಮ ಸುತ್ತಮುತ್ತಲಿನ ಜಾಗವನ್ನು ನೀವು ತಿಳಿದುಕೊಳ್ಳಬೇಕು. ಅಲ್ಲದೆ, ಕಿಕ್ಕಿರಿದ ಸ್ಥಳಗಳು, ಪ್ರಾಣಿಗಳು, ಇತರ ವಸ್ತುಗಳು ಇರುವಲ್ಲಿ ಜಾಗ್ರತೆ ವಹಿಸಬೇಕು.. ವಾಹನಗಳು ಓಡಾಡುವ ಸ್ಥಳದಲ್ಲಿ ಎಂದಿಗೂ ಈ ರೀತಿ ನಡಿಗೆ ಮಾಡಬೇಡಿ..

ಆದ್ರೆ ತಲೆತಿರುಗುವ ಸಮಸ್ಯೆ ಇರುವವರು, ಕಾಲುಗಳಲ್ಲಿ ಶಕ್ತಿ ಇಲ್ಲದವರು ಈ ಪ್ರಯತ್ನ ಮಾಡಬೇಡಿ.. ಇನ್ನು ಏನೇ ಮಾಡಬೇಕೆಂದರೂ ವೈದ್ಯರ ಸಲಹೆ ಪಡೆದೇ ಮಾಡಿ.. ಇದು ವಿಶ್ವಾಸಾರ್ಹವೇ ಆಗಿದ್ದರೂ ವೈದ್ಯರ ಸಲಹೆ ಮೇರೆಗೆ ಮಾತ್ರ ಮಾಡುವುದು ಒಳ್ಳೆಯದು..

ಇದನ್ನೂ ಓದಿ; ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!

Share Post