International

Birds Mystery Death; ಹಾರುತ್ತಲೆ ಕೆಳಗೆಬಿದ್ದು ಸತ್ತ ನೂರಾರು ಪಕ್ಷಿಗಳು..!

ಮೆಕ್ಸಿಕೋ: ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದ ಪಕ್ಷಿಗಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿವೆ. ಅಲ್ಲೇ ಅವುಗಳ ಜೀವವೂ ಹಾರಿಹೋಗಿದೆ. ಅದೇನು ಕಾರಣವೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಈ ಘಟನೆ ನಡೆದಿರೋದು ಮೆಕ್ಸಿಕೋದಲ್ಲಿ.

ಮೆಕ್ಸಿಕೋದ ಜಿವಾವಾ ಎಂಬಲ್ಲಿ ಅರಶಿಣ ಬಣ್ಣದ ತಲೆಯ ಕಪ್ಪು ಬಣ್ಣ ಮೈಬಣ್ಣದ ಹಕ್ಕಿಗಳ ಗುಂಪು ಹಾರುತ್ತಾ ಬಂದಿದೆ. ಒಂದೇ ಬಾರಿಗೆ ಎಲ್ಲಾ ಹಕ್ಕಿಗಳೂ ಒಂದು ಮನೆ ಸಮೀಪ ಇಳಿದಿವೆ. ಅದ್ರಲ್ಲಿ ಕೆಲ ಹಕ್ಕಿಗಳು ಹಾರಿ ಮುಂದೆ ಸಾಗಿವೆ. ಆದ್ರೆ, ಕೆಳಗಿಳಿದ ನೂರಾರು ಹಕ್ಕಿಗಳು ಮೇಲೇಳದೇ ಅಲ್ಲೇ ಸಾವನ್ನಪ್ಪಿವೆ.

ಸೋಮವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ವಿಚಿತ್ರವನ್ನು ನೋಡಿ ಸ್ಥಳೀಯರು ಆಶ್ಚರ್ಯಚಕಿತರಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ವಿಷಗಾಳಿ ಸೇವನೇಯಿಂದ ಅಥವಾ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿದ ಕಾರಣದಿಂದ ಪಕ್ಷಿಗಳು ಸಾವನ್ನಪ್ಪಿರಬಹುದೆಂದು ಹೇಳಲಾಗುತ್ತಿದೆ.

 

Share Post