International

ಲಸಿಕೆ ಹಾಕಿಸಿಕೊಳ್ಳದವರನ್ನು ಕೆಲಸದಿಂದ ವಜಾ ಮಾಡಲು ಮುಂದಾದ ಗೂಗಲ್

ನವದೆಹಲಿ : ತಂತ್ರಜ್ಞಾನದ ದೈತ್ಯ ಗೂಗಲ್‌ ಸಂಸ್ಥೆಯು ಲಸಿಕೆ ಹಾಕಿಸಿಕೊಳ್ಳದವರನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಡಿಸೆಂಬರ್‌ ೩ ರೊಳಗೆ ಅಪ್‌ಲೋಡ್‌ ಮಾಡಲು ಸೂಚಿಸಿತ್ತು ಗೂಗಲ್.‌ ನಿಗದಿತ ವಾಯ್ದೆ ಮುಗಿದರೂ ಲಸಿಕೆ ಪಡೆಯದ ಅಥವಾ ಪ್ರಮಾಣಪತ್ರ ಅಪ್‌ಲೋಡ್‌ ಮಾಡದವರನ್ನು ಗೂಗಲ್‌ ಸಂಪರ್ಕಿಸಲು ಶುರುಮಾಡಿದೆ. ಎಂದು ಖಾಸಗಿ ಚಾನೆಲ್‌ ವರದಿ ಮಾಡಿದೆ.

ಜನವರಿ ೧೮ರ ಒಳಗೆ ಕೋವಿಡ್‌ ನಿಯಮ ಪಾಲಿಸದ ಉದ್ಯೋಗಿಗಳನ್ನು ೩೦ದಿನಗಳವರೆಗೆ ವೇತನ ಸಹಿತ ರಜೆಯಲ್ಲಿ ಇರಿಸಲಾಗುತ್ತೆ. ನಂತರ ೬ತಿಂಗಳು ವೇತನ ರಹಿತ ವೈಯಕ್ತಿಕ ರಜೆ ನೀಡಿ ನಂತರ ವಜಾಗೊಳಿಸಲಾಗುವುದು ಎಂದು ವರದಿಯಾಗಿದೆ.

Share Post