International

ಶಾಲೆ ಮೇಲೆ ಇಸ್ರೇಲ್‌ ದಾಳಿ; 20 ಮಕ್ಕಳ ದುರ್ಮರಣ!

ಗಾಜಾ; ಇಸ್ರೇಲ್ ಸೈನಿಕರು ಗಾಜಾದ ಶಾಲೆಯೊಂದರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ.. ಇತ್ತ ಹಿಜ್ಬುಲ್ಲಾ ಕೂಡಾ ಡ್ರೋನ್‌ ದಾಳಿ ಮಾಡಿದೆ.. ಮಧ್ಯ ಇಸ್ರೇಲ್‌ನ ಸೇನಾ ನೆಲೆಯ ಮೇಲೆ ಡ್ರೋನ್‌ ದಾಳಿ ಮಾಡಿದ್ದು, ನಾಲ್ಕು ಮಂದಿ ಇಸ್ರೇಲ್‌ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ..
ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಶಾಲೆಯ ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ್ದಾರೆ.. ನುಸಿರಾತ್‌ನಲ್ಲಿ ಈ ಶಾಲೆಯಲ್ಲಿ ಯುದ್ಧದಿಂದ ಸ್ಥಳಾಂತರವಾಗಿದ್ದ ಪ್ಯಾಲೆಸ್ತೇನಿಯನ್ನರಿಗೆ ಆಶ್ರಯ ನೀಡಲಾಗಿತ್ತು.. ಈ ಹಿನ್ನೆಲೆಯಲ್ಲಿ ಇಸ್ರೇಲ್‌ ಶಾಲೆ ಮೇಲೆ ದಾಳಿ ಮಾಡಿದೆ..
ಇನ್ನು ಬೈರುತ್‌ನಲ್ಲಿ 22 ಮಂದಿಯನ್ನು ಇಸ್ರೇಲಿ ಸೈನಿಕರು ಕೊಂದಿದ್ದರು.. ಇದಕ್ಕೆ ಪ್ರತೀಕಾರವಾಗಿ ಲೆಬನಾನ್‌ ಮೂಲದ ಹಿಜ್ಬುಲ್ಲಾ ಬಿನ್ಯಾಮಿನಾ ನಗರದ ಬಳಿ ದಾಳಿ ನಡೆಸಲಾಗಿದೆ..

Share Post