International

ಬೆಲಾರಸ್‌ನಲ್ಲಿ ರಷ್ಯಾ-ಉಕ್ರೇನ್‌ ಶಾಂತಿ ಸಭೆ: ಯುದ್ಧ ಶುರುವಾದ ಬಳಿಕ 2ನೇ ಸುತ್ತಿನ ಮಾತುಕತೆ

ಬೆಲಾರಸ್:‌  ರಷ್ಯಾ-ಉಕ್ರೇನ್ ಮಾತುಕತೆ ಕೊನೆಗೂ ಆರಂಭವಾಗಿದೆ. ಬೆಲಾರಸ್‌ನಲ್ಲಿ ಎರಡು ದೇಶಗಳ ಪ್ರತಿನಿಧಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದಾರೆ. ಉಕ್ರೇನ್ ಪರವಾಗಿ ಏಳು ಮಂದಿ ರಕ್ಷಣಾ ಸಚಿವರು ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರರೆ. ಮಾತುಕತೆಗೂ ಮೊದಲು ಝೆಲೆನ್ ಸ್ಕಿ ರಷ್ಯಾವು ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಮತ್ತು ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ರು. ಸದ್ಯ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳ್ಳಲಿದೆಯೇ ಅಥವಾ ಮುಂದುವರಿಯುತ್ತದೆಯೇ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

ಕೀವ್‌ನಲ್ಲಿರುವ ಜನರು ಬೇರೆ ಕಡೆ ಹೋಗಬಹುದು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಬೇರೆಡೆಗೆ ಹೋಗಲು ರಸ್ತೆಗಳು ಮುಕ್ತವಾಗಿವೆ ಎಂದು ಸ್ಪಷ್ಟಪಡಿಸಿದರು. ತನ್ನ ಗುರಿ ನಾಗರಿಕರ ಮೇಲೆ ದಾಳಿ ಮಾಡುವುದು ಅಲ್ಲ ಎಂದು ಪುಟಿನ್ ಹೇಳಿದ್ದಾರೆ.

ಮಾತುಕತೆಗೂ ಮೊದಲು, ಬೆಲಾರಸ್ ಸಂಚಲನ ಸೃಷ್ಟಿಸುವ ಮಾತೊಂದನ್ನು ಹೇಳಿದೆ. ರಷ್ಯಾ ವಿರುದ್ಧ ಮತ್ತಷ್ಟು ನಿಯಮ ಮತ್ತು ನಿರ್ಬಂಧಗಳನ್ನು ಹಾಕಿದ್ರೆ ಮೂರನೇ ಮಹಾ ಯುದ್ಧ ನಡೆಯುವುದರಲ್ಲಿ ಸಂಶಯವೇ ಇಲ್ಲ ಎಂದಿದೆ.

Share Post