Bengaluru

ಸಿದ್ದರಾಮಯ್ಯನವರ ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ ಕಾಗೇರಿ-ಸದನ ನಾಳೆಗೆ ಮುಂದೂಡಿಕೆ

ವಿಧಾನಸಭೆ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಸಚಿವ ಈಶ್ವರಪ್ಪನವರನ್ನು ಸದನದಿಂದ ವಜಾ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ನಿಲುವಳಿ ಸೂಚನೆಯನ್ನು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಜಾ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ವಾದ/ಪ್ರತಿವಾದ ಆಲಿಸಿದ ಬಳಿಕ ಕಾಂಗ್ರೆಸ್‌ ನಾಯಕರು ಹೊರಡಿಸಿರುವ ವಿಚಾರ ನಿಲುವಳಿ ಸೂಚನೆ ಅಡಿಯಲ್ಲಿ ಬರುವುದಿಲ್ಲ ಎಂದು ಸಭಾಪತಿ ತೀರ್ಮಾನಿಸಿ ವಿಧಾನಸಭೆ ಕಲಾಪದಲ್ಲಿ ತಿರಸ್ಕಾರ ಮಾಡಿದ್ರು.

ಸಭಾಪತಿಯವರ ಈ ನಿಲುವಿಗೆ ಕಾಂಗ್ರೆಸ್‌ ನಾಯಕರು ಸದನಸದಲ್ಲಿ ಗಲಭೆ, ಗದ್ದಲ ಉಂಟು ಮಾಡಿ ಬೇಕೆ ಬೇಕು..ನ್ಯಾಯ ಬೇಕೆಂದು ಧರಣಿ ನಡೆಸಿದ್ರು. ಅಯ್ಯೋ ಅನ್ಯಾಯ ಎಂಬ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರಧ್ವಜದವನ್ನು ಪ್ರದರ್ಶನ ಮಾಡಿದ್ರು.

ಸದನದ ಬಾವಿಗಿಳಿದು ಕೈ ನಾಯಕರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ನಾಳೆಗೆ ಸಭಾಪತಿ ಮುಂದೂಡಿದರು.

Share Post