ಅಮೆರಿಕಾದಲ್ಲಿ ಒಂದೇ ದಿನಕ್ಕೆ 5ಲಕ್ಷ ಕೋವಿಡ್ ಕೇಸ್ ದಾಖಲು
ವಾಷಿಂಗ್ಟನ್ : ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಹರಡುವಿಕೆ ತೀವ್ರವಾಗುತ್ತಿದ್ದು, ಅಮೆರಿಕಾದಾದ್ಯಂತ ವ್ಯಾಪಿಸುತ್ತಿದೆ. ಒಂದೇ ದಿನದಲ್ಲಿ ದಾಖಲೆಯ ಕೇಸ್‌ಗಳು ಪತ್ತೆಯಾಗಿದೆ. ೫ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ.
ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಮಾಹಿತಿಯ ಪ್ರಕಾರ, ಕೊರೊನಾ ವೈರಸ್ ಶುರುವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟು ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. ೨೪ ಗಂಟೆಗಳಲ್ಲಿ 512552 ಪ್ರಕರಣಗಳು ದಾಖಲಾಗಿದ್ದು 1762 ಮಂದಿ ಮೃತ ಪಟ್ಟಿದ್ದಾರೆ.
ಅಮೆರಿಕಾದಲ್ಲಿ ತೀವ್ರ ಏರು ಗತಿಯಲ್ಲಿ ಕೋವಿಡ್ ಸೋಂಕು ದಾಖಲಾಗುತ್ತಿರುವ ಕಾರಣ ಓಮಿಕ್ರಾನ್ ಸಂಖ್ಯೆ ಕೂಡ ಹೆಚ್ಚುತ್ತಿದೆ ಎನ್ನಲಾಗಿದೆ. ದಾಖಲಾಗಿರುವ ಕೇಸ್‌ಗಳ ಪೈಕಿ ಶೇ58.6 ರಷ್ಟು ಓಮಿಕ್ರಾನ್ ಪ್ರಕರಣಗಳಾಗಿವೆ ಎಂದು ವರದಿಯಾಗಿದೆ.