International

ಜಪಾನ್ ಭೂಕಂಪ; 161ಕ್ಕೇರಿದ ಮೃತರ ಸಂಖ್ಯೆ

ಹೊಸ ವರ್ಷದ ದಿನದಂದು ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದುವರೆಗೆ 161 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಇನ್ನೂ 100 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆದರೆ, ಹವಾಮಾನ ಸಹಕರಿಸದ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಜನವರಿ 1 ರಂದು ನೊಟೊ ಪೆನಿನ್ಸುಲಾದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿ, ಹಲವಾರು ಕಟ್ಟಡಗಳು ಕುಸಿದು ಬೆಂಕಿ ಹೊತ್ತಿಕೊಂಡವು. ವಾಜಿಮಾ ಮತ್ತು ಸುಜು ನಗರಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.

Share Post