ಹುಡುಗನನ್ನು ಹುಡುಕಿಕೊಟ್ರೆ 4 ಲಕ್ಷ ರೂಪಾಯಿ ಬಹುಮಾನ ಕೊಡ್ತಾಳಂತೆ..!
ವಾಷಿಂಗ್ಟನ್; ಒಂಟಿಯಾಗಿ ಜೀವನ ಮಾಡುತ್ತಿರುವ ಮಹಿಳೆಯೊಬ್ಬರು ಮದುವೆ ಮಾಡಿಕೊಳ್ಳಲು ಬಯಸಿದ್ದು, ಹುಡುಗನನ್ನು ಹುಡುಕಿಕೊಡಲು ಆಫರ್ ಕೊಟ್ಟಿದ್ದಾಳೆ. ಹುಡುಗನನ್ನು ಹುಡುಕಿಕೊಟ್ಟರೆ 5 ಸಾವಿರ ಡಾಲರ್ ಅಂದ್ರೆ 4 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ವಾಷಿಂಗ್ಟನ್‌ನ ಮಹಿಳೆಯೊಬ್ಬರು ಹೇಳಿದ್ದಾರೆ.
ಲಾಸ್ ಏಂಜಲೀಸ್‌ನ ಈವ್ ಟೆಲ್ಲಿ ಕೊಲ್ಸನ್ ಎಂಬ 35 ವರ್ಷದ ಮಹಿಳೆ ಒಂಟಿ ಜೀವನದಿಂದ ಬೇಸತ್ತಿದ್ದಾಳೆ. ಈಕೆಗೆ ಈಗ ಗಂಡು ಬೇಕಂತೆ. ಹುಡುಕಿಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಹುಡುಗನನ್ನು ಹುಡುಕಿ ಕೊಡಿ, ಹುಡುಗ ಹುಡುಕಿಕೊಟ್ಟವರಿಗೆ 4 ಲಕ್ಷ ರೂಪಾಯಿ ನೀಡೋದಾಗಿ ಹೇಳಿದ್ದಾಳೆ.
ಈ ಹಿಂದೆ ಅವರು ಸ್ನೇಹಿತರಲ್ಲೇ ಒಬ್ಬರನ್ನ ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದರಂತೆ. ಆದ್ರೆ ಅದು ಸಾಧ್ಯವಾಗಿಲ್ಲ. ಈಗ ಮದುವೆಗೆ ಸಿದ್ಧತೆ ನಡೆಸಿದ್ದಾರೆ.