Bengaluru

ನೈಟ್‌ ಕರ್ಫ್ಯೂ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಸರ್ಕಾರ ವಿಧಿಸಿದ್ದ ನೈಟ್‌ ಕರ್ಫ್ಯೂಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್‌ ತಡೆಗಟ್ಟುವ ಸಲುವಾಗಿ ಡಿಸೆಂಬರ್‌ ೨೮ ರಿಂದ ಮುಂದಿನ ತಿಂಗಳು ಅಂದರೆ ಜನವರಿ ೭ರವರೆಗೆ ನೈಟ್‌ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ ಇನ್ನೇನು ಹೊಸ ವರ್ಷಕ್ಕೆ ೨ ದಿನ ಬಾಕಿ ಇದೆ. ನಗರದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್‌ ಹಾಕುವ ಸಲುವಾಗಿ ಸರ್ಕಾರ ಕೆಲ ನಿರ್ಬಂಧಗಳನ್ನು ಹೇರಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ರವರೆಗೆ ನಿಷೇಧಾಜ್ಞೆ ವಿಧಿಸಿದ್ದಾರೆ. ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ನಗರದ ಎಲ್ಲ ಕಡೆ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಹೀಗಾಗಿ ರಾತ್ರಿ ೧೦ ಗಂಟೆ ಮೇಲೆ ಓಡಾಡಿದ ವಾಹನಗಳನ್ನು ತಪಾಸಣೆ ಮಾಡಿದರು.
ಇನ್ನು ಬೆಂಗಳೂರಿನಲ್ಲಿ ಓಪನ್‌ ಇದ್ದ ಹೋಟೆಲ್‌, ಪಬ್‌ , ಬಾರ್‌ ರೆಸ್ಟೋರೆಂಟ್‌ ಗಳನ್ನು ಮುಚ್ಚುವಂತೆ ಪೊಲೀಸರು ತಿಳಿಸಿದರು.
ಹಾಗೇ ಪೊಲೀಸ್‌ ಕಮೀಷನರ್‌ ಹೇಳಿದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಪೊಲೀಸ್‌ ವಾಹನದಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಕರ್ಫ್ಯೂ ಸಹಕರಿಸುವಂತೆ ಮನವಿ ಮಾಡಿದರು.
ಅಂದಹಾಗೆ ಹೊಸ ವರ್ಷ ಆಚರಣೆಗೆ ಬೆಂಗಳೂರಿನಲ್ಲಿ ಬ್ರೇಕ್‌ ಹಾಕಿದ್ದಕ್ಕೆ ಜನರೆಲ್ಲ ತಮ್ಮ ಊರುಗಳತ್ತ ತೆರಳಿದ್ದಾರೆ. ಇನ್ನು ಕೆಲವರು ಹೊರ ರಾಜ್ಯಗಳಿಗೆ ಹೋಗಿ ನ್ಯೂ ಇಯರ್‌ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಪೊಲೀಸರು ಬರುತ್ತಿದ್ದ ಗಾಡಿಗಳನ್ನು ತಪಾಸಣೆ ಮಾಡುತ್ತಿದ್ದರಿಂದ ವಾಹನ ದಟ್ಟಣೆ ಉಂಟಾಯಿತು.

Share Post