International

ಅಮೆರಿಕ ಅಧ್ಯಕ್ಷನ ಮಗನಿಗೆ ಜೈಲು ಶಿಕ್ಷೆ..!; 25 ಶಿಕ್ಷೆ ಅನುಭವಿಸಬೇಕಾ ಬಿಡೆನ್‌ ಪುತ್ರ..?

ನ್ಯೂಯಾರ್ಕ್; ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರ ಪುತ್ರ ಹಂಟರ್ ಬಿಡೆನ್ (54) ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಹಂಟರ್ ಬಿಡೆನ್ ಅವರು ಬಂದೂಕನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ಆದರೆ ಆತನಿಗೆ ವಿಧಿಸುವ ಶಿಕ್ಷೆಯನ್ನು ನ್ಯಾಯಾಲಯ ಇನ್ನೂ ಪ್ರಕಟಿಸಿಲ್ಲ. ಸಾಮಾನ್ಯವಾಗಿ ನ್ಯಾಯಾಲಯದ ಅಪರಾಧ ಸಾಬೀತಾದ 120 ದಿನಗಳಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗುತ್ತದೆ. ಈ ಪ್ರಕರಣದಲ್ಲಿ ಜೋ ಬಿಬೆನ್ ಪುತ್ರನಿಗೆ ಯಾವ ರೀತಿಯ ಶಿಕ್ಷೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹಂಟರ್ ಬಿಡೆನ್ ಅವರು ಎರಡು ಅಕ್ರಮ ಬಂದೂಕು ಖರೀದಿಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿದ್ದಾರೆ. ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದೆ. ಈ ವೇಳೆ ಮಾತನಾಡಿರುವ ಬಿಡೆನ್‌ , ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ. ಹಂಟರ್ ಗರಿಷ್ಠ 25 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ..

ಅಮೆರಿಕದ ಇತಿಹಾಸದಲ್ಲಿ ದೇಶದ ಅಧ್ಯಕ್ಷರ ಪುತ್ರನಿಗೆ ಜೈಲು ಶಿಕ್ಷೆ ವಿಧಿಸಿರುವುದು ಇದೇ ಮೊದಲು. ಹಂಟರ್ ಬಿಡೆನ್‌ಗೆ ಮೊದಲ ಎಣಿಕೆಯಲ್ಲಿ ಹತ್ತು ವರ್ಷಗಳು, ಎರಡನೇ ಎಣಿಕೆಯಲ್ಲಿ ಐದು ವರ್ಷಗಳು ಮತ್ತು ಮಾರಕ ಆಯುಧವನ್ನು ಖರೀದಿಸುವಾಗ ಅವರ ಬಳಿಯಿದ್ದ ಡ್ರಗ್ಸ್ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಮತ್ತೊಂದು ಹತ್ತು ವರ್ಷಗಳು ಶಿಕ್ಷೆ ವಿಧಿಸಬಹುದು.

 

Share Post