Health

Palav Leaf; ಪಲಾವ್‌ ಎಲೆಗಳಿಂದ ಮಧುಮೇಹ ನಿಯಂತ್ರಿಸಬಹುದಂತೆ!

ದಶಕದ ಹಿಂದೆ 50 ದಾಟಿದವರಿಗೆ ಮಧುಮೇಹ ಬರುತ್ತಿತ್ತು.. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಮಧುಮೇಹ ಬಾಧಿಸುತ್ತಿದೆ.. ಮಕ್ಕಳೂ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಜೀವನಶೈಲಿ ಮತ್ತು ಸರಿಯಾದ ಆಹಾರ ಕ್ರಮದಿಂದ ಮಾತ್ರ ಇದನ್ನು ನಿಯಂತ್ರಿಸಬಹುದು. ಈ ಕಾಯಿಲೆಯಿಂದ ಬಳಲುತ್ತಿರುವವರ ರಕ್ತದಲ್ಲಿನ ಸಕ್ಕರೆ ಮಟ್ಟವು ಅನಿಯಂತ್ರಿತವಾಗಿ ಏರಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಮಧುಮೇಹವನ್ನು ನಿಯಂತ್ರಿಸುವುದು ಬಹಳ ಮುಖ್ಯ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಕೆಲವು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಪಲಾವ್ ಎಲೆ ಮದುಮೇಹಕ್ಕೆ ಉತ್ತಮ ಮದ್ದು ಎಂದು ಹೇಳಲಾಗುತ್ತದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಪಲಾವ್ ಎಲೆ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪಲಾವ್ ಎಲೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ನೋಡೋಣ ಬನ್ನಿ.

ಇದನ್ನೂ ಓದಿ; Tips for Bad Breath; ಬಾಯಿ ದುರ್ಗಂಧ ಬರ್ತಿದೆಯೇ..?; ಈ ಟಿಪ್ಸ್‌ ಫಾಲೋ ಮಾಡಿ!

ಔಷದೀಯ ಗುಣ ಹೊಂದಿರುವ ಎಲೆ;

ಔಷದೀಯ ಗುಣ ಹೊಂದಿರುವ ಎಲೆ; ಪಲಾವ್ ಎಲೆಯನ್ನು ಹೆಚ್ಚಾಗಿ ಮಸಾಲೆ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಪಲಾವ್ ಎಲೆಗಳ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಎಲೆಗಳಲ್ಲಿರುವ ಪಾಲಿಫಿನಾಲ್‌ಗಳು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಇದರ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ; Cancer; ಕ್ಯಾನ್ಸರ್‌ಗೆ ಔಷಧಿ ಕಂಡುಹಿಡಿದ ಟಾಟಾ ಸಂಸ್ಥೆ; ಒಂದು ಮಾತ್ರೆ 100 ರೂಪಾಯಿ!

 ಪಲಾವ್ ಎಲೆಯನ್ನು ತೆಗೆದುಕೊಳ್ಳುವುದು ಹೇಗೆ..?;

ಪಲಾವ್ ಎಲೆಯನ್ನು ತೆಗೆದುಕೊಳ್ಳುವುದು ಹೇಗೆ..?; ಮಧುಮೇಹ ನಿಯಂತ್ರಣಕ್ಕೆ ಪಲಾವ್ ಎಲೆಯ ರಸವನ್ನು ಸೇವಿಸಬಹುದು. ಇದಕ್ಕಾಗಿ ಬಾಣಲೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ, ಈ ನೀರಿಗೆ 2-3 ಪಲಾವ್ ಎಲೆಗಳನ್ನು ಸೇರಿಸಿ ಮತ್ತು ಸುಮಾರು 5 ನಿಮಿಷಗಳ ಕಾಲ ಕುದಿಸಬೇಕು. ನಂತರ ಉಗುರು ಬೆಚ್ಚಗೆ ಆಗುವಂತೆ ಆರಿಸಿ ಕುಡಿಯಬೇಕು.  ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಹೇಳಲಾಗಿದೆ.

ಉಸಿರಾಟದ ಸಮಸ್ಯೆಗಳಿಗೂ ಈ ಎಲೆ ಪರಿಹಾರ;

ಉಸಿರಾಟದ ಸಮಸ್ಯೆಗಳಿಗೂ ಈ ಎಲೆ ಪರಿಹಾರ;  ಬಿರಿಯಾನಿ ಎಲೆಗಳ ಸೇವನೆಯು ಶೀತ, ಕೆಮ್ಮು, ಗಂಟಲು ನೋವು ಮುಂತಾದ ಉಸಿರಾಟದ ಸಮಸ್ಯೆಗಳನ್ನೂ ಸಹ ಪರಿಹರಿಸುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇದು ಕೀಲು ನೋವು ಮತ್ತು ಸಂಧಿವಾತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಎಲೆಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಇವುಗಳಿಂದ ತಯಾರಿಸಿದ ಚಹಾವನ್ನು ಪ್ರತಿನಿತ್ಯ ಕುಡಿಯುವುದರಿಂದ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಚಹಾ ಮಾಡಿ ಕುಡಿಯುವುದರಿಂದ ತಿಂದ ಆಹಾರ ಬೇಗ ಜೀರ್ಣವಾಗುತ್ತದೆ. ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ ಮತ್ತು ಜೈವಿಕ ಕಾರ್ಯವು ಸುಧಾರಿಸುತ್ತದೆ.

ಇದನ್ನೂ ಓದಿ; Low Iron Levels; ಐರನ್‌ ಕಡಿಮೆ ಇದ್ದರೆ ದೇಹದಲ್ಲಾಗುವ ಬದಲಾವಣೆ ಏನು..?

ಬಿರಿಯಾನಿ ಎಲೆಗಳಲ್ಲಿ ಇರುವ ರುಟಿನ್, ಕೆಫೀಕ್ ಆಮ್ಲ ಇತ್ಯಾದಿಗಳು ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ. ಹೃದಯಾಘಾತದಂತಹ ಅಪಾಯಗಳು ಕಡಿಮೆಯಾಗುತ್ತವೆ. ಈ ಎಲೆಗಳು ಕ್ಯಾನ್ಸರ್ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.

ವಿಶೇಷ ಸೂಚನೆ; ಈ ಮಾಹಿತಿಯನ್ನು ಇಂಟರ್‌ನೆಟ್‌ ನಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇದು ವಿಶ್ವಾಸಾರ್ಹತೆಯನ್ನು ಹೊಂದಿದ್ದರೂ, ಯಾವುದೇ ಮದ್ದನ್ನು ತೆಗೆದುಕೊಳ್ಳುವಾಗ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ತೆಗೆದುಕೊಳ್ಳಬೇಕು. ನಾವೇ ಚಿಕಿತ್ಸೆ ಮಾಡಿಕೊಳ್ಳುವುದು ಸರಿಯಾದ ವಿಧಾನವಲ್ಲ. ಹೀಗಾಗಿ, ವೈದ್ಯರ ಸಲಹೆ ಪಡೆದು ಮನೆ ಮದ್ದುಗಳನ್ನು ಉಪಯೋಗಿಸುವುದು ಒಳ್ಳೆಯದು.

Share Post