Health

ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಕಿಡ್ನಿಗಳು ಸಮಸ್ಯೆಯಲ್ಲಿದ್ದಂತೆ ಲೆಕ್ಕ!

ಪ್ರಪಂಚದಾದ್ಯಂತ ಕಿಡ್ನಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಪ್ರತಿ ಹತ್ತು ಜನರಲ್ಲಿ ಒಬ್ಬರು‌ ಒಂದಿಲ್ಲೊಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಇಂಡಿಯನ್‌ ಸೊಸೈಟಿ ಆಫ್‌ ನೆಫ್ರಾಲಜಿ ಮಾಡಿರುವ ಅಧ್ಯಯನದ ಪ್ರಕಾರ, ವಿಶ್ವದಾದ್ಯಂತ 84 ಕೋಟಿ ಜನರು ದೀರ್ಘಕಾಲಿಕ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಪ್ರಪಂಚದಲ್ಲಿ ಜನ ಯಾವ ಯಾವ ಕಾರಣ, ರೋಗದಿಂದ ಸಾಯುತ್ತಿದ್ದಾರೆ ಎಂದು ಅಧ್ಯಯನ ಮಾಡಿದಾಗ, 10 ಪ್ರಮುಖ ಕಾರಣಗಳಲ್ಲಿ ಮೂತ್ರಪಿಂಡ ಸಮಸ್ಯೆ 7ನೇ ಸ್ಥಾನದಲ್ಲಿದೆ..

ಇದನ್ನೂ ಓದಿ; ಈ ಏಳು ಲಕ್ಷಣಗಳಿದ್ದರೆ ನಿಮ್ಮ ಕಣ್ಣುಗಳು ಹಾಳಾಗುತ್ತಿವೆ ಎಂದರ್ಥ..!

ಭಾರತದಲ್ಲಿ ಪ್ರತಿ ವರ್ಷ 2 ಲಕ್ಷ ಮಂದಿಗೆ ಕಾಯಿಲೆ!;
ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಎರಡು ಲಕ್ಷದಿಂದ 2.5ಲಕ್ಷದಷ್ಟು ಜನರು ಮೂತ್ರಿಪಿಂಡ ಕಾಯಿಲೆಗೆ ತುತ್ತಾಗುತ್ತಿದ್ದಾರೆ.. ಅದ್ರಲ್ಲೂ ವಯೋವೃದ್ಧರಲ್ಲಿ ಶೇಕಡಾ 8 ರಿಂದ 10ರಷ್ಟು ಜನ ದೀರ್ಘಕಾಲಿಕ ಮೂತ್ರಪಿಂಡ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.. ಭಾರತದಲ್ಲಿ ಯುವಕರಲ್ಲೂ ಮೂತ್ರಿಪಿಂಡ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.. ಬದಲಾದ ಆಹಾರ ಪದ್ಧತಿಗಳು, ಸರಿಯಾಗಿ ನೀರು ಕುಡಿಯದೇ ಇರುವುದು, ಕೆಟ್ಟ ಅಭ್ಯಾಸಗಳಿಂದಾಗಿ ಈ ಕಿಡ್ನಿ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ..

ಆರಂಭದಲ್ಲಿ ಪತ್ತೆಯಾಗದ ಸಮಸ್ಯೆ;
ಕಿಡ್ನಿ ಸಮಸ್ಯೆ ಹೆಚ್ಚಾಗಲು ಅದು ಆರಂಭಿಕ ಹಂತದಲ್ಲಿ ಪತ್ತೆಯಾಗುವುದಿಲ್ಲ.. ಸಮಸ್ಯೆ ಗಂಭೀರವಾದ ನಂತರವೇ ಸಮಸ್ಯೆ ಬಹಿರಂಗವಾಗುತ್ತದೆ.. ಇದರಿಂದಾಗಿಯೇ ದೀರ್ಘಕಾಲಿಕ ಕಿಡ್ನಿ ಸಮಸ್ಯೆಯಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ..

ಇದನ್ನೂ ಓದಿ; ಮಾವು ನೈಸರ್ಗಿಕವಾಗಿ ಹಣ್ಣಾಗಿರುವುದಾ ಎಂದು ಪರೀಕ್ಷಿಸುವುದು ಹೇಗೆ?

ರಕ್ತ ಶುದ್ಧಿ ಮಾಡುವ ಕಿಡ್ನಿಗಳು;
ಮನುಷ್ಯನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.. ಅವರು ದೇಹದಲ್ಲಿನ ರಕ್ತವನ್ನು ನಿರಂತರವಾಗಿ ಶುದ್ಧಿ ಮಾಡುತ್ತಿರುತ್ತವೆ.. ರಕ್ತದಲ್ಲಿನ ತ್ಯಾಜ್ಯಗಳು, ದೇಹಕ್ಕೆ ಅನಗತ್ಯವಾದ ಖನಿಜಗಳನ್ನು ರಕ್ತದಿಂದ ಬೇರ್ಪಡಿಸಿ ಮೂತ್ರದ ಮೂಲಕ ಹೊರಹಾಕುತ್ತವೆ.. ಇತ್ತೀಚೆಗೆ ನಾನು ಬ್ಯುಸಿ ಲೈಫ್‌ ನಲ್ಲಿ ಸರಿಯಾಗಿ ನೀರು ಸೇವನೆ ಮಾಡುವುದಿಲ್ಲ, ನಮ್ಮ ಜೀವನಶೈಲಿ ಕೂಡಾ ಬದಲಾಗಿದೆ. ನಮ್ಮ ಆಹಾರ ಪದ್ಧತಿ, ನಮ್ಮ ಅಭ್ಯಾಸಗಳು, ಪ್ರತಿಯೊಂದಕ್ಕೂ ಔಷಧಿಗಳ ಸೇವನೆ ಮುಂತಾದ ಕಾರಣಗಳಿಂದಾಗಿ ಕಿಡ್ನಿಗಳು ಹಾಳಾಗಲು ಕಾರಣವಾಗುತ್ತಿವೆ..

ಇದನ್ನೂ ಓದಿ; ಶ್ವಾಸಕೋಶ ಆರೋಗ್ಯವಾಗಿರಿಸಲು ಈ ಆಹಾರ ಸೇವಿಸಿ..

ಮೂತ್ರಪಿಂಡ ಕಾರ್ಯ ನಿಧಾನವಾದಾಗ ಏನಾಗುತ್ತೆ..?
ನಮ್ಮ ಆಹಾರ ಪದ್ಧತಿ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನಾರೋಗ್ಯಕರ ಆಹಾರಗಳು ನಮ್ಮ ದೇಹ ಸೇರುತ್ತವೆ.. ಇದರಿಂದಾಗಿ ರಕ್ತದಲ್ಲಿ ಹೆಚ್ಚು ತ್ಯಾಜ್ಯ ಸೇರುತ್ತದೆ.. ಆಗ ಮೂತ್ರಪಿಂಡಗಳ ಕಾರ್ಯ ನಿಧಾನವಾಗುತ್ತದೆ.. ಹಾಗೆ ಆದಾಗ ರಕ್ತದಲ್ಲಿನ ತ್ಯಾಜ್ಯ ಹೊರತೆಗೆಯುವ ಕೆಲಸ ಸರಿಯಾಗಿ ನಡೆಯುವುದಿಲ್ಲ.. ಆಗ ಮೂತ್ರಪಿಂಡದ ಕಾಯಿಲೆಗಳು ಶುರುವಾಗುತ್ತವೆ.. ವಿಚಿತ್ರ ಏನು ಅಂದ್ರೆ ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸೋದಿಲ್ಲ.. ಕಿಡ್ನಿಯಲ್ಲಿ ಸಮಸ್ಯೆ ಉಂಟಾಗಿದ್ದರೂ ಆರಂಭಿಕ ಹಂತದಲ್ಲಿ ನಮಗೆ ಗೊತ್ತಾಗುವುದಿಲ್ಲ.. ರೋಗ ಉಲ್ಭಣಗೊಂಡಾಗ ತೊಂದರೆಯಾಗಿರುವುದು ಗೊತ್ತಾಗುತ್ತದೆ.

ಇದನ್ನೂ ಓದಿ; ಬೆಂಗಳೂರಲ್ಲಿ ಮತ್ತೊಂದು ರೋಗದ ಗಂಡಾಂತರ; ಏನಿದು ಗ್ಲಾಂಡರ್ಸ್?

ಮೂತ್ರಪಿಂಡ ಕಾಯಿಲೆಗಳು, ಅದರ ಲಕ್ಷಣಗಳೇನು..?

ಮೂತ್ರಪಿಂಡದ ಕಲ್ಲುಗಳು;
ಆಸಿಡ್‌ಯುಕ್ತ, ಕೊಬ್ಬು ಮತ್ತು ಹೆಚ್ಚಿನ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕಿಡ್ನಿ ಕಾರ್ಯ ನಿಧಾನಗೊಳ್ಳುತ್ತದೆ.. ಜೊತೆಗೆ ನೀರು ಹೆಚ್ಚಾಗಿ ಕುಡಿಯದಿರುವುದರಿಂದಲೂ ಸಮಸ್ಯೆಯಾಗುತ್ತದೆ.. ಮೊದಲನೆಯದಾಗಿ ಕಿಡ್ನಿಯಲ್ಲಿ ಕಲ್ಲುಗಳು ಏರ್ಪಡುತ್ತವೆ.. ಕಿಡ್ನಿಯಲ್ಲಿ ಒಂದೆರಡು ಕಲ್ಲುಗಳು ರೂಪುಗೊಂಡರೆ ಸಮಸ್ಯೆ ಗೊತ್ತಾಗುವುದಿಲ್ಲ.. ಆದ್ರೆ ಕಲ್ಲು ಸಂಖ್ಯೆ ಹೆಚ್ಚಳ ಹಾಗೂ ಅವುಗಳ ಗಾತ್ರದಲ್ಲಿ ಹೆಚ್ಚಳವಾದರೆ ನೋವು ಹೆಚ್ಚಾಗುತ್ತದೆ.. ಕಡಿಮೆ ನೀರು ಕುಡಿಯುವುದು, ಸ್ಥೂಲಕಾಯತೆ, ಜೀವನಶೈಲಿ ಸಮಸ್ಯೆಗಳು ಮತ್ತು ಬದಲಾದ ಆಹಾರ ಪದ್ಧತಿಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಇನ್ನು ಮೂತ್ರಪಿಂಡದಲ್ಲಿ ಕಲ್ಲು ಏರ್ಪಟ್ಟಿದ್ದರೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಬರುತ್ತದೆ. ಮೂತ್ರದಲ್ಲಿ ರಕ್ತ ಬರುತ್ತದೆ.. ಮೂತ್ರನಾಳದಲ್ಲಿ ಅಡಚಣೆಗಳಾಗಿ ಸರಿಯಾಗಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಷ್ಟವಾಗುತ್ತದೆ.. ಇನ್ನು ಕಲ್ಲು ಇರುವ ಪ್ರದೇಶದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ; ಸಂತೋಷದ ಜೀವನಕ್ಕೆ 7 ಸೂತ್ರಗಳು; ಹೀಗೆ ಬದುಕಿದರೆ ದುಃಖವೇ ಇರೋದಿಲ್ಲ!

ಮೂತ್ರಪಿಂಡ ವೈಫಲ್ಯ;
ಮೂತ್ರಪಿಂಡಗಳು ವೈಫಲ್ಯವಾದರೆ ಕೃತಕವಾಗಿ ರಕ್ತಶುದ್ಧಿ ಮಾಡಬೇಕಾಗುತ್ತದೆ.. ಅದಕ್ಕಾಗಿ ಎರಡು ಮೂರು ದಿನಕ್ಕೊಮ್ಮೆ ಡಯಾಲಿಸಿಸ್‌ ಮಾಡಿಸಬೇಕಾಗಿ ಅನಿವಾರ್ಯತೆ ಬರುತ್ತದೆ.. ಮೂತ್ರಪಿಂಡಗಳು ವೈಫಲ್ಯವಾಗುತ್ತಿದ್ದರೂ ವೈದ್ಯರಿಗೆ ಅದರ ಲಕ್ಷಣಗಳು ಗೊತ್ತಾಗುವುದಿಲ್ಲ.. ರೋಗಲಕ್ಷಣಗಳು ಸರಿಯಾಗಿ ಕಾಣಿಸಿಕೊಳ್ಳುವುದಿಲ್ಲ.. ಕೊನೆಯ ಹಂತಕ್ಕೆ ಬಂದಾಗಲೇ ಅದರ ರೋಗ ಲಕ್ಷಣ ಕಾಣಿಸೋದು.. ಇದನ್ನು ಐದು ಹಂತಗಳಲ್ಲಿ ಪರಿಗಣಿಸಲಾಗುತ್ತದೆ.. ಆದ್ರೆ ನಾಲ್ಕನೇ ಹಂತದವರೆಗೂ ಯಾವುದೇ ಲಕ್ಷಣ ಕಾಣಿಸೋದಿಲ್ಲ ಅಂತಾರೆ ವೈದ್ಯರು.. ಮೂತ್ರಪಿಂಡದ ಕಾರ್ಯನಿರ್ವಹಣೆ 100 ರಿಂದ 10ಕ್ಕಿಳಿದಾಗ ಮಾತ್ರ ಸಮಸ್ಯೆ ಗೊತ್ತಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ..

ಮೂತ್ರಪಿಂಡದ ವೈಫಲ್ಯ ಆಗುತ್ತಿದೆ ಎಂದಾದಾಗ ಹಸಿವಿನ ಕೊರತೆ ಉಂಟಾಗುತ್ತದೆ.. ಹಸಿವೆಯೇ ಆಗೋದಿಲ್ಲ.. ಆಗಾಗ ವಾಂತಿಯಾಗುತ್ತದೆ.. ಮನುಷ್ಯ ತುಂಬಾ ಡಲ್‌ ಆಗಿಬಿಡುತ್ತಾನೆ.. ದೇಹ ಊದಿಕೊಳ್ಳಲು ಶುರುವಾಗುತ್ತದೆ.. ಅದರಲ್ಲೂ ಹೊಟ್ಟೆಯ ಭಾಗ ಊದಿಕೊಳ್ಳುತ್ತದೆ.. ಉಬ್ಬಸ ಹೆಚ್ಚಾಗುತ್ತದೆ..

ಇದನ್ನೂ ಓದಿ; ಈ ಹಾಲು ಕುಡಿದರೆ‌‌ ಬೇಗ ನಿದ್ದೆ ಬರುತ್ತೆ; ಆರೋಗ್ಯಕ್ಕೂ ಸಂಜೀವಿನಿ


ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD);
ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಮಧುಮೇಹ (ಮಧುಮೇಹ ಅಥವಾ ಸಕ್ಕರೆ) ಮತ್ತು ಅಧಿಕ ರಕ್ತದೊತ್ತಡ (ಅಧಿಕ ರಕ್ತದೊತ್ತಡ) ಇರುವವರಲ್ಲಿ ಇದು ತುಂಬಾ ಸಾಮಾನ್ಯವಾದ ಕಾಯಿಲೆ.. ಇದನ್ನು ಗುಣಪಡಿಸುವುದು ತುಂಬಾನೇ ಕಷ್ಟ.. ಕಾಲಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಕಾಯಿಲೆ ಇನ್ನಷ್ಟು ಉಲ್ಬಣವಾಗುವುದರಿಂದ ತಡೆಯಬಹುದು..

ಇದರ ರೋಗಲಕ್ಷಣ ನೋಡುವುದಾದರೆ ವಾಕರಿಕೆ, ವಾಂತಿ ಬರುವುದು ಆಗುತ್ತಿರುತ್ತದೆ.. ಹಸಿವೆಯೇ ಆಗುವುದಿಲ್ಲ.. ಪಾದಗಳು ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.. ಉಸಿರಾಟದ ತೊಂದರೆ ಹೆಚ್ಚಾಗುತ್ತದೆ.. ನಿದ್ರಾಹೀನತೆ ಉಂಟಾಗುತ್ತದೆ.. ಜೊತೆಗೆ ಕಡಿಮೆ ಮೂತ್ರ ವಿಸರ್ಜನೆ ಅಥವಾ ಒಮ್ಮೊಮ್ಮೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿರುತ್ತದೆ..

ಇದನ್ನೂ ಓದಿ; ಪ್ಯಾರಾಸಿಟಮೋಲ್‌ ಹೆಚ್ಚು ತೆಗೆದುಕೊಂಡರೆ ಹೃದಯಾಘಾತ ಆಗುತ್ತಂತೆ!

ಡಯಾಬಿಟಿಕ್ ನೆಫ್ರೋಪತಿ;
ಮಧುಮೇಹ ಹೊಂದಿರುವ ಪ್ರತಿ ಮೂವರಲ್ಲಿ ಒಬ್ಬರು ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ.. ವಿಶ್ವಾದ್ಯಂತ ಮೂತ್ರಪಿಂಡ ಕಾಯಿಲೆಗೆ ಮಧುಮೇಹವು ಪ್ರಮುಖ ಕಾರಣವಾಗಿದೆ.. ಸಕ್ಕರೆ ನಿಯಂತ್ರಣದಲ್ಲಿಲ್ಲದ ಜನರಲ್ಲಿ ಮಧುಮೇಹ ಮೂತ್ರಪಿಂಡ ಕಾಯಿಲೆ ಕಂಡುಬರುತ್ತದೆ.

ಈ ಸಮಸ್ಯೆ ಉಂಟಾದಾಗ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.. ಮೂತ್ರದಲ್ಲಿ ನೊರೆ ಬರುವುದು, ಯಾವಾಗಲೂ ಡಲ್‌ ಇರುವಂತೆ ಅನಿಸುವುದು, ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗುವುದು, ತುರಿಕೆ ಕಾಣಿಸಿಕೊಳ್ಳುವುದು, ವಾಕರಿಕೆ, ವಾಂತಿ ಬರುವುದು ಆಗುತ್ತದೆ.. ಈ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕ ಮಾಡುವುದು ಒಳ್ಳೆಯದು..
ಇದನ್ನೂ ಓದಿ; ಕೃಷಿ ಹೊಂಡಕ್ಕೆ ಬಿದ್ದ ಬಾಲಕ; ಮೇಲೆ ಬರಲಾರದೇ ಸಾವು!

ಅಧಿಕ ರಕ್ತದೊತ್ತಡದ ನೆಫ್ರೋಸ್ಕ್ಲೆರೋಸಿಸ್;
ಮಧುಮೇಹದ ಜೊತೆಗೆ ಮೂತ್ರಪಿಂಡದ ಮೇಲೆ ಪರಿಣಾಮ ಬೀರುವ ಮತ್ತೊಂದು ಸಮಸ್ಯೆ ಅಧಿಕ ರಕ್ತದೊತ್ತಡ. ಅಧಿಕ ರಕ್ತದೊತ್ತಡವು ಮೂತ್ರಪಿಂಡಗಳಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದಿಂದ ಅನಗತ್ಯ ತ್ಯಾಜ್ಯ ಮತ್ತು ಖನಿಜಗಳ ತೆಗೆದುಹಾಕುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಮೂತ್ರಪಿಂಡದ ಕಾರ್ಯವು ದುರ್ಬಲಗೊಳ್ಳುತ್ತದೆ. ರಕ್ತನಾಳಗಳಲ್ಲಿ ಅನಾವಶ್ಯಕ ದ್ರವಗಳು ಶೇಖರಣೆಯಾಗಿ ಬಿಪಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ..

ಈ ಸಮಸ್ಯೆ ಇದ್ದವರಿಗೆ ಕೂಡಾ ವಾಕರಿಕೆ, ವಾಂತಿ ಬರುತ್ತಿರುತ್ತದೆ.. ತಲೆತಿರುಗುವಿಕೆ ಜಾಸ್ತಿಯಾಗಲಿದ್ದು, ತಲೆ ತಿರುಗುವಿಕೆ ಹೆಚ್ಚಾಗುತ್ತದೆ.. ಕುತ್ತಿಗೆ ನೋವು ಕೂಡಾ ಹೆಚ್ಚಾಗುತ್ತದೆ..

ಇದನ್ನೂ ಓದಿ;ಮನೆಯ ಮುಂದೆಯೇ ಕಾಡಾನೆಗಳ ಕಾಳಗ; ನೋಡಲು ರೋಚಕ, ಆದ್ರೆ ಪ್ರಾಣಸಂಕಟ!

ಮೂತ್ರನಾಳದ ಸೋಂಕು;
ಮೂತ್ರನಾಳದ ಸೋಂಕು ಮೂತ್ರಪಿಂಡದ ಕಾಯಿಲೆಯಲ್ಲದಿದ್ದರೂ, ಇದು ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ. ಮೂತ್ರನಾಳದಲ್ಲಿನ ಬ್ಯಾಕ್ಟೀರಿಯಾದಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಕಿಡ್ನಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.. ಮೂತ್ರನಾಳದ ಸೋಂಕಿನಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತಿದ್ದರೆ, ಬೆನ್ನು ನೋವು, ಜ್ವರ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಹೊಟ್ಟೆ ನೋವು, ಮೂತ್ರದಲ್ಲಿ ರಕ್ತ ಬರುವುದು, ವಾಕರಿಕೆ, ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..

ಇದನ್ನೂ ಓದಿ; ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ; ಏನು ಸಿಕ್ತು..?

 

Share Post