Health

Eye Blink; ಕಣ್ಣು ಜಾಸ್ತಿ ಮಿಟುಕಿಸಿದರೆ ಏನಾಗುತ್ತೆ ಗೊತ್ತಾ..?

ಕೆಲವರು ವಿನಾಕಾರಣ ಕಣ್ಣು ಮಿಟುಕಿಸುತ್ತಲೇ ಇರುತ್ತಾರೆ. ಇನ್ನು ಕೆಲವರು ಆದಷ್ಟು ಕಣ್ಣು ಮುಟುಕಿಸೋದಕ್ಕೇ ಹೋಗೋದಿಲ್ಲ.. ಯಾವಾಗಲೂ ಕಣ್ಣು ಬಿಟ್ಟುಕೊಂಡೇ ಇರುತ್ತಾರೆ. ಹೀಗೆ ಎರಡು ವರ್ತನೆಗಳು ಕೂಡಾ ಕಣ್ಣಿನ ಆರೋಗ್ಯಕ್ಕೆ ತೊಂದರೆಯೇ.. ನೀವು ಒಂದು ನಿಮಿಷದಲ್ಲಿ ಎಷ್ಟು ಬಾರಿ ಕಣ್ಣು ಮಿಟುಕಿಸುತ್ತೀರಿ..? ಇದರ ಆಧಾರದ ಮೇಲೆ ನಿಮ್ಮ ಕಣ್ಣಿನ ಆರೋಗ್ಯ ನಿಂತಿದೆ. ಅತಿಯಾಗಿ ಕಣ್ಣು ಮಿಟುಕಿಸಿದರೆ, ಬೇರೆ ಬೇರೆ ಆರೋಗ್ಯದ ತೊಂದರೆಗಳಿಗೆ ಕಾರಣವಾಗಬಹುದು ಅಂತ ವೈದ್ಯರು ಹೇಳುತ್ತಿದ್ದಾರೆ.

ಇದನ್ನೂ ಓದಿ; Ayurveda Tips; ಈ 5 ಆಯುರ್ವೇದ ವಸ್ತುಗಳಿಂದ ನಿಮ್ಮ ಚರ್ಮ ಕಾಂತಿಯುತ!

ಕಣ್ಣು ಮಿಟುಕಿಸುವ ಅಭ್ಯಾಸದಿಂದ ತೊಂದರೆ;

ಕೆಲವರು ಸುಮ್ಮನೆ ಕಣ್ಣು ಮಿಟುಕಿಸುತ್ತಿರುತ್ತಾರೆ. ಪದೇ ಪದೇ ಕಣ್ಣು ರೆಪ್ಪೆ ಬಡಿದರೆ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಗುದು.. ಹೀಗೆಯೇ ಕಣ್ಣು ರೆಪ್ಪೆ ಬಡಿಯುವುದು ಹೆಚ್ಚಾದರೆ ಬ್ಲೆಫರೊಸ್ಪಾಸ್ಮ ಎನ್ನುವ ನರದ ಕಾಯಿಲೆಗೆ ತುತ್ತಾಗಬಹುದು. ಇದು ಅಪಾಯಕಾರಿ ಕಾಯಿಲೆಯಾಗಿದ್ದು, ಅದರಿಂದ ದೂರವಿರಬೇಕು ಅಂದ್ರೆ ಹೆಚ್ಚು ಕಣ್ಣು ಮಿಟುಕಿಸುವುದನ್ನು ನಿಲ್ಲಿಸಬೇಕು.

ಬ್ಲೆಫರೊಸ್ಪಾಸ್ಮ ಅಂದ್ರೆ ಏನು..?;​
ಬ್ಲೆಫರೊಸ್ಪಾಸ್ಮ್ ಎಂಬುದು ನರರೋಗ ಕಾಯಿಲೆ.. ನೀವು ಕಣ್ಣು ರೆಪ್ಪೆ ಹೆಚ್ಚು ಬಡಿದಾಗ ರೆಪ್ಪೆಗಳನ್ನು ನಿಯಂತ್ರಿಸುವ ಸ್ನಾಯುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದಾಗಿ ನರವೈಜ್ಞಾನಿಕ ಅಸ್ವಸ್ಥತೆ ಕಂಡುಬರುತ್ತದೆ. ಒಂದು ರೀತಿಯಲ್ಲಿ ಕಣ್ಣು ಸೆಳೆತದಂತೆ ಶುರುವಾಗುತ್ತದೆ. ಹೀಗೆಯೇ ಮುಂದುವರೆದರೆ ಕಣ್ಣು ತೆರೆಯೋದಕ್ಕೂ ಕಷ್ಟಪಡಬೇಕಾಗುತ್ತದೆ. ಈ ಸಮಸ್ಯೆ ಎದುರಾದರೆ ಕೂಡಲೇ ಚುಚ್ಚುಮದ್ದು ಪಡೆದು, ಸಮಸ್ಯೆಯಿಂದ ಪಾರಾಗಬೇಕಾಗುತ್ತದೆ. ಸಮಸ್ಯೆ ಹೆಚ್ಚಾದರೆ ಜೀವನವಿಡೀ ಅನುಭವಿಸಬೇಕಾಗಿ ಬರಬಹುದು.

ಇದನ್ನೂ ಓದಿ; Darshan Birthday; ನಟ ದರ್ಶನ್‌ ಹುಟ್ಟುಹಬ್ಬ; ಅಭಿಮಾನಿಗಳ ಸಂಭ್ರಮ

ಬ್ಲೆಫರೊಸ್ಪಾಸ್ಮ್ ಸಮಸ್ಯೆಗೆ ಕಾರಣ ಏನು ಗೊತ್ತಾ..?;
ಬ್ಲೆಫರೊಸ್ಪಾಸ್ಮ ಬರುವುದಕ್ಕೆ ಇಂತಹದ್ದೇ ಅನ್ನೋ ಕಾರಣ ಅಂತೂ ಇಲ್ಲ. ಆದರೆ, ಈ ಕಾಯಿಲೆ ಬಂದರೆ, ಮೆದುಳಿನ ಕಾರ್ಯ ಚಟುವಟಿಕೆಗೆ ಬಹಳಷ್ಟು ಪರಿಣಾಮ ಬೀರಲಿದೆ. ಇದಕ್ಕೆ ಹಲವು ವೈದ್ಯಕೀಯ ಕಾರಣಗಳಿರಬಹುದು ಎಂದು ತಿಳಿದುಬಂದಿದೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಏನೆಲ್ಲಾ ಸಮಸ್ಯೆಯಾಗಲಿದೆ ಅನ್ನೋದು ನಿಮಗೆ ಗೊತ್ತೇ ಇದೆ.

​ಈ ರೋಗಲಕ್ಷಣಗಳನ್ನು ನೀವು ನಿರ್ಲಕ್ಷಿಸಲೇಬೇಡಿ;​
ಕಣ್ಣುರೆಪ್ಪೆಗಳ ಸೆಳೆತದಿಂದ ಸಮಸ್ಯೆ ಶುರುವಾಗುತ್ತದೆ. ರೆಪ್ಪೆ ಬಡಿತ ಹೆಚ್ಚಾಗುತ್ತಾ ಹೋಗುತ್ತದೆ. ಮುಂದೆ ಅದು ಕಣ್ಣು ಸಂಪೂರ್ಣ ಮುಚ್ಚುವಂತೆ ಆಗುತ್ತದೆ. ಆಗ ನಿಮಗೆ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ. ದೃಷ್ಟಿಯ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ರೆಪ್ಪೆ ಮುಚ್ಚಿರುವುದರಿಂದ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ; State Budget; ವಿಭಜನೆಯಾಗಲಿದೆಯಾ ಬೆಳಗಾವಿ ಜಿಲ್ಲೆ..?; ಎರಡು ಹೊಸ ಜಿಲ್ಲೆ ಘೋಷಣೆ ಸಾಧ್ಯತೆ..!

ನಿಮಿಷಕ್ಕೆ ​15 ರಿಂದ 20 ಬಾರಿ ಮಿಟುಕಿಸಿ;

ನಿಮಿಷಕ್ಕೆ 15 ರಿಂದ 20 ಬಾರಿ ರೆಪ್ಪೆ  ಮಿಟುಕಿಸಿದರೆ ನಮ್ಮ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ. ಹೀಗೆ ಮಾಡುವುದರಿಂದ ಕಣ್ಣುಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗುತ್ತದೆ. ಕೊಳೆಗಳನ್ನು ಹೊರಹಾಕಲ್ಪಡುತ್ತದೆ. ಆರೋಗ್ಯವಾಗಿರುವ ಮನುಷ್ಯ ನಿಮಿಷಕ್ಕೆ 15-20 ಬಾರಿ ಕಣ್ಣು ಮಿಟುಕಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.  ಬ್ಲೆಫರೊಸ್ಪಾಸ್ಮ್ ಕಾಯಿಲೆಯಲ್ಲಿ, ಕಣ್ಣುರೆಪ್ಪೆಗಳು ಆಗಾಗ್ಗೆ ಮಿಟುಕಿಸುವ ಸಮಸ್ಯೆ ಪ್ರಾರಂಭವಾಗುತ್ತದೆ.

ಇಂತಹ ಸಮಸ್ಯೆ ನಿಮ್ಮಲ್ಲಿದ್ದರೆ ನೇತ್ರ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.

Share Post