CrimeHealthInternational

ಶಸ್ತ್ರ ಚಿಕಿತ್ಸೆ ವೇಳೆ ವೃದ್ಧೆಗೆ ವೈದ್ಯನಿಂದ ಹಲ್ಲೆ; ವೈದ್ಯ ಅಮಾನತು

ಬೀಜಿಂಗ್; ವೃದ್ಧೆಯೊಬ್ಬರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ವೇಳೆ ವೈದ್ಯರೊಬ್ಬರು ವೃದ್ಧೆಗೆ ಮೂರು ಬಾರಿ ತಲೆಗೆ ಹೊಡೆದಿದ್ದಾರೆ. ಈ ಘಟನೆ 2019 ರಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಹೆಚ್ಚು ವೈರಲ್‌ ಆಗುತ್ತಿದೆ. ಚೀನಾದ ಬೀಜಿಂಗ್‌ನಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ಇನ್ನು ಆಸ್ಪತ್ರೆ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದ್ದು, ಆಸ್ಪತ್ರೆಯಿಂದ ಅಮಾನತು ಮಾಡಲಾಗಿದೆ.

82 ವರ್ಷದ ವೃದ್ಧೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧೆಗೆ ವೈದ್ಯರು ಅನಸ್ತೇಷಿಯಾ ನೀಡಿದ್ದರು. ಇದೇ ವೇಳೆ ವೈದ್ಯರು ಹೇಳಿದ ಭಾಷೆ ವೃದ್ಧೆಗೆ ಅರ್ಥವಾಗಿಲ್ಲ. ಹೀಗಾಗಿ ವೃದ್ಧೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದರಿಂದ ಸಿಟ್ಟುಗೊಂಡ ವೈದ್ಯ ಮೂರು ಬಾರಿ ವೃದ್ಧೆ ತಲೆಗೆ ಹೊಡೆದಿದ್ದಾನೆ.

ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯನ ವಿರುದ್ಧ ಕ್ರಮ ಕೈಗೊಂಡಿದೆ.

 

Share Post