Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?
ಬೆಂಗಳೂರು; ಮನುಷ್ಯರಿಗೆ ಕಾಮನ್ ಆಗಿ ಬರುವ ಆರೋಗ್ಯ ಸಮಸ್ಯೆ ತಲೆನೋವು.. ನಾನಾ ಕಾರಣಗಳಿಗಾಗಿ ತಲೆನೋವು ಬರುತ್ತದೆ.. ಅದು ಕೆಲಸ ಮಾಡೋದಕ್ಕೆ ತೊಂದರೆ ಕೊಡುತ್ತಿರುತ್ತವೆ.. ತಲೆನೋವು ಬಂದಾಕ್ಷಣ ತಕ್ಷಣದ ರಿಲೀಫ್‌ಗೆ ಜನ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.. ಆದ್ರೆ ಇದ್ರಿಂದ ಸೈಡ್ ಎಫೆಕ್ಟ್ ಜಾಸ್ತಿ.. ಹೀಗಾಗಿ ಮಾತ್ರೆಗಳಿಗೆ ಬದಲಾಗಿ ನೈಸರ್ಗಿಕ ಕೆಲವೊಂದು ವಿಧಾನಗಳನ್ನು ಫಾಲೋ ಮಾಡಿದರೆ ತಲೆನೋವು ಬರದಂತೆ ತಡೆಯಬಹುದು, ಬಂದರೂ ಅದನ್ನೂ ಬೇಗ ಹೋಗಲಾಡಿಸಬಹುದು.. ಆ ವಿಧಾನಗಳನ್ನು ನಾವು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.. ಆ ತಿಳಿದುಕೊಳ್ಳೋಣ ಬನ್ನಿ..
ಮೊದಲ ತಲೆನೋವಿಗೆ ಕಾರಣಗಳನ್ನು ತಿಳಿಯಿರಿ;
ತಲೆನೋವು ಒಂದೇ ಕಾರಣಕ್ಕೆ ಬರೋದಿಲ್ಲ.. ತಲೆನೋವಿಗೆ ಹಲವಾರು ಕಾರಣಗಳಿರುತ್ತವೆ.. ಹೆಚ್ಚು ಕೆಲಸ ಮಾಡಿದರೆ ತಲೆನೋವು ಬರುತ್ತದೆ.. ಬಿಸಿಲಲ್ಲಿ ಹೆಚ್ಚಾಗಿ ನಿಂತಿದ್ದರೆ ತಲೆನೋವು ಬರುತ್ತದೆ.. ಮಾನಸಿಕ ಒತ್ತಡದಿಂದ ತಲೆನೋವು ಬರುತ್ತದೆ.. ಹೆಚ್ಚು ಸುತ್ತಾಟ ನಡೆಸಿದರೂ ತಲೆನೋವು ಬರುತ್ತದೆ.. ಆತಂಕ, ನಿದ್ರೆಯ ಕೊರತೆ, ಕೆಟ್ಟ ಆಹಾರದ ಸೇವನೆ, ಹೆಚ್ಚು ಮದ್ಯ ಸೇವನೆ, ಕಣ್ಣು ಸರಿಯಾಗಿ ಕಾಣಿಸದಿರುವುದು, ಅಧಿಕ ರಕ್ತದೊತ್ತಡ ಹೀಗೆ ಹಲವಾರು ಕಾರಣಗಳಿಗೆ ತಲೆನೋವು ಬರುತ್ತದೆ.. ಹೀಗಾಗಿ ಮೊದಲ ತಲೆನೋವು ಕಡಿಮೆ ಮಾಡಲು ತಲೆನೋವು ಯಾಕೆ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು..
ಕಡಿಮೆ ನೀರು ಕುಡಿದರೂ ತಲೆನೋವು;
ಮನುಷ್ಯ ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರು ಕುಡಿಯಬೇಕು.. ದೇಹದಲ್ಲಿ ನಿರ್ಜಲೀಕರಣದಿಂದಲೂ ತಲೆನೋವು ಬರುತ್ತದೆ.. ಹೀಗಾಗಿ ದೇಹಕ್ಕೆ ಬೇಕಾದಷ್ಟು ನೀರು ಕುಡಿದರೆ ತಲೆನೋವಿನಿಂದ ದೂರ ಉಳಿಯಬಹುದು.. ಜೊತೆಗೆ ನೀವು ಗಿಡಮೂಲಿಕೆಗಳ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.. ಶುಂಠಿ ಟೀ ಮತ್ತು ನಿಂಬೆ ಟೀ ರಕ್ತನಾಳಗಳ ಉರಿಯೂತವನ್ನು ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ..
ಚೂಯಿಂಗ್ ಅಗೆಯುವುದು;
ಮೆತ್ತನೆಯ ಆಹಾರಗಳನ್ನು ಸೇವಿಸುವುದರಿಂದಲೂ ತಲೆನೋವು ಕಡಿಮೆಯಾಗುತ್ತದೆ.. ಕೆಲವರು ಚೂಯಿಂಗ್ ಗಮ್ ಯಾವಾಗಲೂ ಅಗೆಯುತ್ತಿರುತ್ತಾರೆ.. ಇದರಿಂದ ದವಡೆಯ ಪ್ರದೇಶದಲ್ಲಿ ಮತ್ತು ಕೆನ್ನೆಯ ಒಳಭಾಗದಲ್ಲಿ ನೋವು ತರಿಸುತ್ತದೆ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.
ತಲೆ ಮಸಾಜ್ ಮಾಡುವುದು;
ಕೂದಲನ್ನು ಬಿಗಿಯಾಗಿ ಕಟ್ಟಿದರೆ ತಲೆನೋವು ಬರಬಹುದು.. ಆದಷ್ಟು ಕೂದಲನ್ನು ಲೂಸ್ ಆಗಿ ಬಿಡುವುದು ಒಳ್ಳೆಯದು.. ಇದರ ಜೊತೆಗೆ ನೆತ್ತಿಯ ಮೇಲೆ ಮೃದುವಾಗಿ ಮಸಾಜ್ ಮಾಡುವುದು ಒಳ್ಳೆಯದು.. ಇದು ನಿಮ್ಮೆ ವಿಶ್ರಾಂತಿ ಮೂಡ್ ಬರಿಸುತ್ತದೆ.. ಹಣೆ ಮತ್ತು ಕುತ್ತಿಗೆಯ ಮೇಲೆ ಮೃದುವಾಗಿ ಮಸಾಜ್ ಮಾಡುವುದರಿಂದ ಒತ್ತಡದಿಂದ ಬರುವ ತಲೆನೋವು ಕಡಿಮೆಯಾಗುತ್ತದೆ..
ವಿಶ್ರಾಂತಿ ಅತಿ ಮುಖ್ಯ;
ತಲೆನೋವು ಇದ್ದಾಗ ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಬೇಕು.. ಮಾನಸಿಕ ಒತ್ತಡದಿಂದಲೇ ಬಹುತೇಕರಿಗೆ ತಲೆನೋವು ಬರೋದು.. ಹೀಗಾಗಿ ತಲೆನೋವು ಬಂದಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು.. ಸಾಧ್ಯವಾದರೆ 1-2 ಗಂಟೆಗಳ ಕಾಲ ಕತ್ತಲ ಕೋಣೆಯಲ್ಲಿ ಮಲಗಬೇಕು. ಈ ಸಮಯದಲ್ಲಿ ಮೊಬೈಲ್, ಗ್ಯಾಜೆಟ್ ಬಳಕೆ ನಿಲ್ಲಿಸಬೇಕು..
ಕೋಲ್ಡ್ ಪ್ಯಾಕ್;
ಕೆಲವೊಮ್ಮೆ ಅತಿಯಾದ ಶಾಖದಿಂದ ತಲೆನೋವು ಉಲ್ಬಣಗೊಳ್ಳುತ್ತದೆ. ಆದ್ದರಿಂದ, ಹಣೆಯ ಮೇಲೆ ಕೋಲ್ಡ್ ಪ್ಯಾಕ್ ಅನ್ನು ಹಚ್ಚಬೇಕು. ಐಸ್ ಪ್ಯಾಕ್‌ಗಳನ್ನು ಮೃದುವಾದ ಬಟ್ಟೆಯಲ್ಲಿ ಸುತ್ತಿ ಹಣೆಯ ಮೇಲೆ ಸವರಬೇಕು. ಹೀಗೆ 15 ನಿಮಿಷಗಳ ಕಾಲ ಮಾಡಿದರೆ ತಲೆನೋವು ಬರಬರುತ್ತಾ ಕಡಿಮೆಯಾಗುತ್ತದೆ.